ಕಾಸರಗೋಡು: ಅಲ್ಪ ಸಂಖ್ಯಾತ ಸಮುದಾಯದಿಂದ ಸ್ವ ಉದ್ಯೋಗಕ್ಕೆ ಅರ್ಜಿ ಆಹ್ವಾನ
ಕಾಸರಗೋಡು, ಜು.25: ಅಲ್ಪ ಸಂಖ್ಯಾತ ಸಮುದಾಯದ (ಕ್ರಿಶ್ಚಿಯನ್, ಮುಸ್ಲಿಂ, ಜೈನ, ಪಾರ್ಸಿ, ಸಿಖ್, ಬುದ್ಧ) 18 ರಿಂದ 55 ವರ್ಷದೊಳಗಿನವರಿಂದ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ನಿಗಮ ಸ್ವಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದೆ.
ಗ್ರಾಮೀಣ ಪ್ರದೇಶದವರಿಗೆ 81 ಸಾವಿರ ರೂ =., ನಗರ ಪ್ರದೇಶದವರಿಗೆ 1.03 ಲಕ್ಷ ರೂ. ಕುಟುಂಬ ವಾರ್ಷಿಕ ಆದಾಯ ಹೊಂದಿದವರಿಗೆ 20 ಲಕ್ಷ ರೂ. ತನಕ ಆರು ಶೇಕಡಾ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಇದಲ್ಲದೆ ವಾರ್ಷಿಕ ಆದಾಯ 6 ಲಕ್ಷ ರೂ. ಗಿಂತ ಕೆಳಗಿನ ಕುಟುಂಬ ಆದಾಯ ಹೊಂದಿರುವ ಪುರುಷರಿಗೆ 8 ಶೇಕಡಾ ಬಡ್ಡಿದರದಲ್ಲಿ, ಮಹಿಳೆಯರಿಗೆ ಆರು ಶೇಕಡಾ ಬಡ್ಡಿ ದರದಲ್ಲಿ ಕನಿಷ್ಠ 30 ಲಕ್ಷ ರೂ. ಸಾಲ ಲಭಿಸಲಿದೆ.
ಕೃಷಿ, ಸಣ್ಣ ಉದ್ದಿಮೆ, ಸೇವಾ ವಲಯಕ್ಕೊಳಪಟ್ಟ ಸಂಸ್ಥೆ ಆರಂಭಕ್ಕೆ ಸಾಲ ನೀಡಲಾಗುವುದು. ಮರುಪಾವತಿ ಕಾಲಾವಧಿ 60 ತಿಂಗಳು , ಸಮಯಕ್ಕನುಗಣವಾಗಿ ಸಾಲ ಮರುಪಾವತಿಸುವವವರಿಗೆ ವಿಶೇಷ ಸಬ್ಸಿಡಿ ಲಭಿಸಲಿದೆ. ಅರ್ಜಿ ಫಾರಂ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು. ನಿಗಮದ ವೆಬ್ ಸೈಟ್ www. ksbcdc.com ಯಲ್ಲಿ ಹೆಚ್ಚಿನ ಮಾಹಿತಿ ಲಭಿಸಲಿದೆ.





