ಜಿಂಕೆ ಕೊಂದ ಆರೋಪ: ಇಬ್ಬರ ಬಂಧನ

ಹನೂರು, ಜು. 25: ಕಾವೇರಿ ವನ್ಯಜೀವಿ ವಲಯದಲ್ಲಿ ಜಿಂಕೆ ಕೊಂದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ಸಮೀಪದ ಮರಿಯಮಂಗಲ ಗ್ರಾಮದ ಜಾನ್ ಪಾಲ್ ಜಯರಾಜ್ ( 26) ಹಾಗೂ ಶಾಗ್ಯ ಗ್ರಾಮದ ರಂಗನಾಯಕ (40) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜೂ. 30 ರಂದು ಕಾವೇರಿ ವನ್ಯಜೀವಿ ವಲಯಕ್ಕೆ ಅಕ್ರಮ ಪ್ರವೇಶ ಮಾಡಿ ಜಿಂಕೆಯನ್ನು ಕೊಂದಿದ್ದರು ಎಂದು ದೂರಲಾಗಿತ್ತು.
Next Story





