ಮುತ್ತಪ್ಪ ರೈಗೆ ಪಾಸ್ ಪೋರ್ಟ್ ಪ್ರಕರಣ ಆ.21ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಜು.25: ಎಲ್ಲ ರಾಷ್ಟ್ರಗಳಿಗೂ ಪ್ರಯಾಣ ಬೆಳೆಸಲು ಪಾಸ್ ಪೋರ್ಟ್ ನೀಡಬೇಕೆಂದು ಕೋರಿ ಮುತ್ತಪ್ಪ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 21 ಮುಂದೂಡಿದೆ. ಈ ಸಂಬಂಧ ಮುತ್ತಪ್ಪ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ವಿಚಾರಣೆಯನ್ನು ಆ.21ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಮುತ್ತಪ್ಪ ರೈ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳೂ ಖುಲಾಸೆಗೊಂಡಿವೆ. ಹೀಗಾಗಿ, ರೈ ಅವರಿಗೆ ಎಲ್ಲ ರಾಷ್ಟ್ರಗಳಿಗೂ ಪ್ರಯಾಣ ಬೆಳೆಸಲು ಪಾಸ್‌ಪೋರ್ಟ್ ನೀಡಬೇಕು. ಆದರೆ, ಪಾಸ್‌ಪೋರ್ಟ್ ಇಲಾಖೆಯು ರೈ ಅವರ ಪಾಸ್‌ಪೋರ್ಟ್‌ನ್ನು ವಶಕ್ಕೆ ಪಡೆದುಕೊಂಡು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Next Story





