ಮಂಗಳೂರು ಏರ್‌ಪೋರ್ಟ್‌ನಲ್ಲಿ 34 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು, ಜು. 25: ಕಂದಾಯ ಗುಪ್ತಚರ ನಿರ್ದೇಶಾನಲಯ (ಡಿಎಆರ್)ದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಜ್ಪೆ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್‌ವೇಸ್‌ನ ಏರ್‌ಕ್ರಾಫ್ಟ್ ನಿರ್ವಹಣೆಯ ತಾಂತ್ರಿಕ ಸಿಬಂದಿಯೊಬ್ಬನನ್ನು ಬಂಧಿಸಿ ಆತನಿಂದ 1166.5 ಗ್ರಾಂ ತೂಕದ 34.41 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಲಾಲ್‌ಬೀನ್ ಜೀನ್ ಬಂಧಿತ ಸಿಬ್ಬಂದಿ. ಗಲ್ಫ್ ರಾಷ್ಟ್ರದಿಂದ ಮಂಗಳೂರಿಗೆ ಬರುವ ವಿಮಾನದ ಶೌಚಾಲಯಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳ ಸಾಗಾಣಿಕೆಯಾಗುತ್ತಿತ್ತು. ಲಾಲ್‌ಬೀನ್ ಈ ಚಿನ್ನವನ್ನು ಏಜೆಂಟರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಇದ್ದ ಅಧಿಕಾರಿಗಳು ಜು. 25ರಂದು ಕಾರ್ಯಾಚರಣೆ ನಡೆಸಿ ದುಬೈನಿಂದ ಬಂದ ಜೆಟ್ ಏರ್‌ವೇಸ್ ವಿಮಾನದಿಂದ ಈ ಚಿನ್ನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಚಿನ್ನವನ್ನು ಸಂಜೆ ವೇಳೆ ಸಿಟಿ ಸೆಂಟರ್‌ನಲ್ಲಿ ಏಜೆಂಟನೊಬ್ಬನಿಗೆ ಒಪ್ಪಿಸಬೇಕಿತ್ತು. ತನ್ನ ಕೆಲಸಕ್ಕೆ ಆತನ 20 ಸಾವಿರ ಸಂಭಾವನೆ ಪಡೆಯುತ್ತಿದ್ದ ಎಂದು ಡಿಎಆರ್ ಉಪ ನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಧೀಶ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.





