Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ರಾಮ ಮಂದಿರಕ್ಕೆ ಬದ್ಧ: ಸೌಹಾರ್ದಕ್ಕೆ...

ರಾಮ ಮಂದಿರಕ್ಕೆ ಬದ್ಧ: ಸೌಹಾರ್ದಕ್ಕೆ ಪ್ರಯತ್ನ; ಪೇಜಾವರ ಶ್ರೀ

ವಾರ್ತಾಭಾರತಿವಾರ್ತಾಭಾರತಿ25 July 2017 10:27 PM IST
share
ರಾಮ ಮಂದಿರಕ್ಕೆ ಬದ್ಧ: ಸೌಹಾರ್ದಕ್ಕೆ ಪ್ರಯತ್ನ; ಪೇಜಾವರ ಶ್ರೀ

ಉಡುಪಿ, ಜು.25: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬದ್ಧತೆಯನ್ನು ಹೊಂದಿದ್ದರೂ, ಎಲ್ಲಾ ಧರ್ಮಗಳೊಂದಿಗೆ ಸೌಹಾರ್ದತೆ ಹಾಗೂ ಶಾಂತಿಗೆ ಪ್ರಯತ್ನ ಮುಂದುವರಿಸುವುದಾಗಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಪುನರುಚ್ಛರಿಸಿದ್ದಾರೆ.

ಶ್ರೀ ಕೃಷ್ಣ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ಮಠದಲ್ಲಿ ಮೊದಲ ಬಾರಿ ನಡೆದ ಇಫ್ತಾರ್ ಕೂಟದ ಹಿನ್ನೆಲೆಯಲ್ಲಿ ಕೆಲವು ಬುದ್ಧಿಜೀವಿಗಳು, ತಮಗೆ ಶಾಂತಿ ಸೌಹಾರ್ದದಲ್ಲಿ ಕಳಕಳಿ ಇದ್ದರೆ ರಾಮ ಮಂದಿರ ಚಳವಳಿಯಿಂದ ಹಿಂದೆ ಸರಿಯುವಂತೆ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಸೌಹಾರ್ದವೆಂದರೆ ನಮ್ಮ ಸಿದ್ಧಾಂತ ಮತ್ತು ಧೋರಣೆಯನ್ನು ತೊರೆದು ಶರಣಾಗತಿಯಲ್ಲ. ನಮ್ಮದು ಸ್ವಧರ್ಮ ನಿಷ್ಠೆ, ಪರ ಧರ್ಮ ಸಹಿಷ್ಣುತೆ ಎಂದವರು ಬಣ್ಣಿಸಿದರು. ನಮ್ಮ ಸಿದ್ಧಾಂತಕ್ಕೆ ಅಂಟಿಕೊಂಡೇ ಈಗಲೂ ಸೌಹಾರ್ದದಿಂದ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

ನಾನು ವಿವಾದಿತ ಕಟ್ಟಡ (ಬಾಬರಿ ಮಸೀದಿ)ವನ್ನು ಧ್ವಂಸ ಮಾಡುವ ಕಾರ್ಯದಲ್ಲಿ ಭಾಗವಹಿಸಿರಲಿಲ್ಲ. ನನ್ನ ಪಾತ್ರವೂ ಇರಲಿಲ್ಲ, ಪ್ರಚೋದನೆಯನ್ನು ನೀಡಿರಲಿಲ್ಲ ಎಂದು ಹೇಳಿದ ಪೇಜಾವರಶ್ರೀ, ಆದರೆ ಅಲ್ಲಿ ರಾಮಮಂದಿರವಿತ್ತು, ಅದರ ನಿರ್ಮಾಣವಾಗಬೇಕು ಎಂಬ ಬಗ್ಗೆ ನಮ್ಮೆಲ್ಲಾ ಹಿಂದೂ ಸಂತರಲ್ಲಿ ಏಕಾಭಿಪ್ರಾಯವಿದೆ ಎಂದರು.

ವಿ.ಪಿ.ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸಂಧಾನದಿಂದ ಅದನ್ನು ಬಗೆಹರಿಸಲು ನಾನು ಮಾಡಿದಷ್ಟು ಪ್ರಯತ್ನವನ್ನು ಯಾರೂ ಮಾಡಿಲ್ಲ. ಈಗಲೂ ರಾಮಮಂದಿರಕ್ಕೆ ಅಂಟಿಕೊಂಡೇ ಸೌಹಾರ್ದತೆಯ ಕಾರ್ಯವನ್ನು ಮಾಡುತ್ತೇನೆ ಎಂದರು.

ಇಫ್ತಾರ್ ವಿವಾದ: ಮುಸ್ಲಿಂ ಬಂಧುಗಳಿಗೆ ಶ್ರೀಕೃಷ್ಣ ಮಠದಲ್ಲಿ ಸೌಹಾರ್ದ ಭೋಜನ ಕೂಟವನ್ನು ಏರ್ಪಡಿಸಿದ್ದರ ಹಿಂದೆಯೂ ರಾಜಕೀಯ ಉದ್ದೇಶವನ್ನು ಕಲ್ಪಿಸಿಕೊಂಡು ಕೆಲವರು ಕುಹಕವಾಡಿದ್ದಾರೆ. ಧರ್ಮ ಧರ್ಮಗಳಲ್ಲಿ ಬಿನ್ನತೆ ಯಿದ್ದರೂ ಸೌಹಾರ್ದತೆಯಿರಬೇಕೆಂಬುದು ಮೊದಲಿನಿಂದಲೂ ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಅದಕ್ಕಾಗಿ ಕೇವಲ ಸೌಹಾರ್ದ, ಸಾಮರಸ್ಯದ ದೃಷ್ಟಿಯಿಂದ ಈ ಸೌಹಾರ್ದ ಕೂಟವನ್ನು ನಡೆಸಿದ್ದೇನೆ. ಇದಕ್ಕೆ ರಾಜಕೀಯ ಉದ್ದೇಶವನ್ನು ಕಲ್ಪಿಸುವುದು ಸರ್ವಥಾ ಅನುಚಿತ ಎಂದು ಸ್ವಾಮೀಜಿ ನುಡಿದರು.

ನಮ್ಮ ಹಲವು ಹಿಂದೂ ಬಾಂಧವರು ಕೃಷ್ಣ ಮಠದಲ್ಲಿ ಬಕ್ರೀದ್ ಮಾಡಲು ಅವಕಾಶ ಕಲ್ಪಿಸುತ್ತೀರಾ, ಗೋಮಾಂಸ ಭಕ್ಷಣೆಗೆ ಅವಕಾಶ ನೀಡುತ್ತೀರಾ ಎಂಬ ಕೊಂಕು ನುಡಿಗಳಿಂದ ನಮ್ಮ ಪರಧರ್ಮ ಸಹಿಷ್ಣುತೆಯನ್ನು ಪ್ರಶ್ನಿಸಿದ್ದಾರೆ. ಅವರಿಗೆ ನನ್ನ ಮಾತಿನ ಅರ್ಥವೇ ಆಗಿಲ್ಲ. ಸ್ವಧರ್ಮಕ್ಕೆ ವಿರುದ್ಧವಾಗದಂತೆ ಪರಧರ್ಮ ಸಹಿಷ್ಣುತೆಯನ್ನು ಆಚರಿಸಬೇಕೆಂಬುದೇ ನಮ್ಮ ಧೋರಣೆಯಾಗಿದೆ. ಅದನ್ನು ಅರ್ಥ ಮಾಡಿಕೊಳ್ಳದವರಿಗೆ ನಾನೇನು ಉತ್ತರಿಸಲಿ ಎಂದರು.

ನನ್ನ ನಡೆಯಿಂದ ಮಾಧ್ವ ಸಿದ್ಧಾಂತಕ್ಕಾಗಲೀ, ಹಿಂದೂ ಧರ್ಮಕ್ಕಾಗಲಿ ಯಾವುದೇ ಅಪಚಾರವಾಗಿಲ್ಲ. ಯಾವುದೇ ಶಾಸ್ತ್ರದ ಉಲ್ಲಂಘನೆಯೂ ಆಗಿಲ್ಲ. ಮಠದ ಆವರಣದ ಹೊರಗೆ, ಸಾರ್ವಜನಿಕ ಭೋಜನಶಾಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮಾಧ್ವ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಉಪಾಸನ ಪದ್ಧತಿ ಉಳ್ಳ ಹಿಂದೂ ಧರ್ಮದ ಇತರ ಸಂಪ್ರದಾಯದವರಿಗೆ ಅವರ ಸಂಪ್ರದಾಯದಂತೆ ಜನಪ-ಪೂಜೆಗೆ ಅವಕಾಶ ನೀಡುವಾಗ ಮುಸ್ಲಿಂ ಬಂಧುಗಳಿಗೆ ಮಠದ ಆವರಣದ ಹೊರಗೆ ಅವಕಾಶ ನೀಡಿದ್ದರಲ್ಲಿ ತಪ್ಪೇನಿದೆ ಎಂದವರು ಪ್ರಶ್ನಿಸಿದರು.

ಉಡುಪಿ ಚಲೋ ಸಂದರ್ಭದಲ್ಲಿ ದಲಿತರು ನಡೆದಿದ್ದರಿಂದ ಅಶುದ್ಧವಾಯಿತೆಂದು ಕೃಷ್ಣ ಮಠದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು ಎಂಬ ಆರೋಪವನ್ನು ಅವರು ಅಲ್ಲಗಳೆದರು. ಉಡುಪಿ ಚಲೋ ಜಾಥಾದವರು ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಘೋಷಣೆ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ರಚನಾತ್ಮಕವಾದ ಕೃಷ್ಣ ಮಠ ಪರಿಸರ ಸ್ವಚ್ಚತಾ ಕಾರ್ಯ ನಡೆಸಲಾಯಿತು ಎಂದು ಸಮರ್ಥಿಸಿಕೊಂಡರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X