ಬೀಡಿ ಕಾರ್ಮಿಕರ ವಾಹನದ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ದಾಳಿ

ಮೂಡುಬಿದಿರೆ, ಜು. 25: ಇಲ್ಲಿ ನಡೆದ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ ಮುಗಿಸಿ ತುಮಕೂರಿಗೆ ತೆರಳುತ್ತಿದ್ದ ಬೀಡಿ ಕಾರ್ಮಿಕರ ವಾಹನದ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಶಿರಾಡಿ ಸಮೀಪದ ಅಡ್ಡಹೊಳೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮಹಿಳೆಯರೇ ಬಹುತೇಕ ಇದ್ದ ವಾಹನದ ಕೆಂಬಾವುಟ ಕಿತ್ತು ಹಾಕುವಂತೆ ಆದೇಶಿಸಿದ್ದಾರೆ. ವಾಹನದ ಮೇಲೆ ಸತತ ಕಲ್ಲು ತೂರಾಟ ನಡೆಸಿದ್ದು, ಕತ್ತಲ ನಿರ್ಜನ ಹೆದ್ದಾರಿಯಲ್ಲಿ ನಡೆದ ಈ ದಾಳಿಯಿಂದ ಮಹಿಳಾ ಕಾರ್ಮಿಕರು ಭೀತಿಯಿಂದ ಅಲ್ಲೇ ಉಳಿದಿದ್ದಾರೆ. ಬೀಡಿ ಕಟ್ಟಿ ಕುಟುಂಬ ಸಾಗಿಸುವ ಮಹಿಳಾ ಕಾರ್ಮಿಕರ ಮೇಲೆ ನಡೆದ ಈ ದಾಳಿ ಅತ್ಯಂತ ಹೀನಾಯವಾಗಿದ್ದು, ಪ್ರತಿಯೊಬ್ಬರೂ ಖಂಡಿಸಬೇಕಾದದ್ದು ಎಂದು ಅವರು ತಮ್ಮ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
Next Story





