ಲಾರಿಗಳ ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು

ಕಾಸರಗೋಡು, ಜು.26: ಎರಡು ಲಾರಿಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಲಾರಿ ಚಾಲಕನೋರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಬುಧವಾರ ಪಯ್ಯನ್ನೂರು ಕಣ್ಣಂಗಾಡ್ ನಲ್ಲಿ ನಡೆದಿದೆ.
ಮೃತ ಲಾರಿ ಚಾಲಕನನ್ನು ತಿರುವನಂತಪುರದ ಶಾನವಾಝ್ (35) ಎಂದು ಗುರುತಿಸಲಾಗಿದೆ.
ಕ್ಲೀನರ್ ರಿಯಾಝ್ ಇಬ್ರಾಹೀಂ (24), ಇನ್ನೊಂದು ಲಾರಿಯ ಚಾಲಕ ಮಂಗಳೂರು ಗೋಳಿಕಟ್ಟೆಯ ಸಿರಾಜ್ (20) ಮತ್ತು ಕ್ಲೀನರ್ ಶರೀಫ್ ( 27) ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರ ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ಮೀನು ಸಾಗಾಟ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





