ರಕ್ತಚಂದನ ಮಾರಾಟ ಯತ್ನ: ಇಬ್ಬರ ಬಂಧನ
ಬೆಂಗಳೂರು, ಜು.26: ರಕ್ತಚಂದನದ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತಮಿಳುನಾಡಿನ ಇಬ್ಬರನ್ನು ಇಲ್ಲಿನ ಬಸವನಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಲ್ಲವಾಡಿಯ ತಿರುಪತಿ(33), ವಾಣಂಬಾಡಿಯ ರಾಜೇಂದ್ರನ್(47) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರಕ್ಕೆ ಟಾಟಾ ಸುಮೊ ಕಾರಿನಲ್ಲಿ ರಕ್ತಚಂದನದ ಮರದ ತುಂಡುಗಳನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಬಸವನಗುಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 5 ಲಕ್ಷ ಮೌಲ್ಯದ 398 ಕೆಜಿ ತೂಕದ 11 ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳವು ಪ್ರಕರಣ: ಮಹದೇವಪುರದ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಕಾರು ಕಳವು ಮಾಡಿದ್ದ ಆರೋಪದ ಮೇಲೆ ಹುಳಿಮಾವು ನಿವಾಸಿ ಲೋಕೇಶ್ವರ್ ಎಂಬಾತನನ್ನು ಬಂಧಿಸಿ 5.40 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಡು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
Next Story





