ಮಹಾಕಾಳಿಪಡ್ಪುಪೌರ ಕಾರ್ಮಿಕರ ವಸತಿಗೃಹ ವೀಕ್ಷಣೆ

ಮಂಗಳೂರು, ಜು.26: ಜೆಪ್ಪು ಮಾಹಕಾಳಿಪಡ್ಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ 2.8 ಕೋ.ರೂ. ವೆಚ್ಚದ ಪೌರ ಕಾರ್ಮಿಕರ ವಸತಿಗೃಹವನ್ನು ಶಾಸಕ ಜೆ.ಆರ್.ಲೋಬೊ ಪ್ರಗತಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು 32 ಮನೆಗಳನ್ನು ಒಳಗೊಂಡ ವಸತಿಗೃಹದ ಕಾಮಗಾರಿಯನ್ನು 2018ರೊಳಗೆ ಮುಗಿಸಲು ಸೂಚಿಸಿದರು.
ಈ ಸಂದರ್ಭ ಶಾಸಕರು ಜೆಪ್ಪುಕುಡ್ಪಾಡಿಯ ಪಟ್ಣಪ್ರದೇಶದಲ್ಲಿ ನೇತ್ರಾವತಿ ನದಿಗೆ ಸೇರುವ ಬೃಹತ್ ತೋಡಿಗೆ ತಡೆಗೋಡೆ ನಿರ್ಮಿಸಲು 25 ಲಕ್ಷ ರೂ.ವನ್ನು ಮಂಜೂರು ಮಾಡಿದರು.
ಶಾಸಕರೊಂದಿಗೆ ಕಾರ್ಪೊರೇಟರ್ ಶೈಲಜಾ, ದಿನೇಶ್ ಪಿ.ಎಸ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಮುಹಮ್ಮದ್ ನವಾಝ್, ವಿದ್ಯಾ, ಅಶೋಕ್ ಕುಡ್ಪಾಡಿ, ಇಂಜಿನಿಯರ್ ಗುರುರಾಜ್ ಮರಳಹಳ್ಳಿ, ರಘುಪಾಲ್, ಅಶೋಕ್ ಕುಮಾರ್, ಯಶವಂತ್ ಕಾಮತ್ ಮುಂತಾದವರಿದ್ದರು.
Next Story





