ವೀರಶೈವ ಸಮಾಜ ಛಿದ್ರ ಮಾಡುವ ಹುನ್ನಾರ: ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ

ಗದಗ, ಜು.26: ಲಿಂಗಾಯತ ಧರ್ಮ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಶೈವ ಸಮಾಜ ಛಿದ್ರ ಮಾಡುವ ಹುನ್ನಾರ ನಡೆದಿದೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮುಂಡರಗಿ ಪಟ್ಟಣದಲ್ಲಿ ಮಾತನಾಡಿದ ಅವರು, ವೀರಶೈವ ಪದ ಶ್ರೇಷ್ಠವಾದದ್ದು, ಲಿಂಗಾಯತ, ವೀರಶೈವ ಒಂದೇ ಅನ್ನೊದು ಎಲ್ಲರೂ ಒಪ್ಪಿದ್ದಾರೆ. ಕೆಲವರ ಕೊರಳಲ್ಲಿ ಲಿಂಗ ಇಲ್ಲದಿದ್ದರೂ, ಲಿಂಗಾಯತ ಧರ್ಮದ ಬಗ್ಗೆ ಮಾತನಾಡತ್ತಾರೆ. ವೀರಶೈವ- ಲಿಂಗಾಯತ ಬೇರೆ ಮಾಡುವ ಹೇಳಿಕೆ ಸಮಂಜಸವಲ್ಲ. ಬಸವಣ್ಣನವರು ಹಾಗೂ ಉಳಿದ ಯಾವುದೇ ಶರಣರ ವಚನದಲ್ಲಿ ಎಲ್ಲೂ ಲಿಂಗಾಯತ ಶಬ್ದ ಕಾಣಲ್ಲ. ಹಿಗಾಗಿ ಲಿಂಗಾಯತ ಧರ್ಮ ಬೇರೆ ಮಾಡುವ ಕೂಗು ಎಷ್ಟು ಸೂಕ್ತ ಎಂದು ಶ್ರೀಗಳು ಪ್ರಶ್ನಿಸಿದರು.
ಈ ವಿಷಯದಲ್ಲಿ ಧರ್ಮ ಗುರುಗಳ ಸಲಹೆ ಪಡೆದು ನಿರ್ಣಯ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
Next Story





