ಸಹಾಯಧನಕ್ಕೆ ಅರ್ಜಿ ಆಹ್ವಾನ
ಉಡುಪಿ, ಜು.26: ಬೋವಿ ಅಭಿವೃದ್ಧಿ ನಿಗಮದಿಂದ 2017-18ನೇ ಸಾಲಿ ಗೆ ಬೋವಿ ಜನಾಂಗದವರಿಗೆ (ಪರಿಶಿಷ್ಟ ಜಾತಿ) ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ (ನೀರಾವರಿ ಕೊಳವೆ ಬಾವಿ/ತೆರೆದ ಬಾವಿ), ಉದ್ಯಮಶೀಲತಾ ಅಭಿವೃದ್ಧಿ, ಭೂ ಒಡೆತನ, ಮೈಕ್ರೋ ಕ್ರ್ರೆಡಿಟ್-1 ಯೋಜನೆಗಳಡಿ ಸಹಾಯಧನ ಮತ್ತು ಸಾಲದ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುವುದು.
ಇದರಲ್ಲಿ ಆಸಕ್ತರು ಜಿಲ್ಲಾ ವ್ಯವಸ್ಥಾಪಕರು, ಬೋವಿ ಅಭಿವೃದ್ಧಿ ನಿಗಮ, ಬಿ ಬ್ಲಾಕ್, 2ನೇ ಮಹಡಿ, ಕೊಠಡಿ ಸಂಖ್ಯೆ 302, ಜಿಲ್ಲಾಡಳಿತ ಕಛೇರಿಗಳ ಸಂಕೀರ್ಣ, ರಜತಾದ್ರಿ ಮಣಿಪಾಲ-576104 ಇವರನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ: 0820-2574884ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.
Next Story





