ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕಾಂಗ್ರೇಸ್ ಗೆಲ್ಲಿಸಿ: ಸಚಿವ ರೋಶನ್ ಬೇಗ್

ಹಾಸನ, ಜು.26: ರಾಜಕೀಯ ಅಧಿಕಾರ ವಂಚಿತ ಸಮುದಾಯಕ್ಕೆ ಶಕ್ತಿ ನೀಡುವ ಕೆಲಸವನ್ನು ಕಾಂಗ್ರೇಸ್ ಪಕ್ಷ ಪ್ರಮಾಣಿಕವಾಗಿ ನಿರ್ವಹಿಸುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಆರ್.ರೋಶನ್ ಬೇಗ್ ಹೇಳಿದರು.
ನಗರದ ಕಾಂಗ್ರೇಸ್ ಭವನದಲ್ಲಿ ನಡೆದ ಹಾಸನ ಜಿಲ್ಲಾ ಕಾಂಗ್ರೇಸ್ ಮುಸ್ಲೀಂ ಪ್ರತಿನಿಧಿಗಳ ಸಭೆಯಲ್ಲಿ ಮಾತಾನಾಡಿದ ಅವರು, ಅಹಿಂದ ವರ್ಗಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಕಾಂಗ್ರೇಸ್ ಪಕ್ಷದ ಪಾತ್ರ ಮಹಾತ್ವವಾಗಿದೆ ಎಂದರು. ಈಲ್ಲೆಯ 8 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಿಸಲು ಎಲ್ಲರೂ ಶ್ರಮಿಸುವಂತೆ ಮನವಿ ಮಾಡಿದರು. ಅಧಿಕಾರವಿಲ್ಲದೇ ಯಾವುದೇ ಸಮುದಾಯ ನಿರಿಕ್ಷೀತ ಮಟ್ಟದಲ್ಲಿ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂಬುದು ವಾಸ್ತವವಾಗಿದ್ದು, ಜಿಲ್ಲೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ಉನ್ನತ ಸ್ಥಾನ ಸೀಗಬೇಕು ಎಂಬುದರಲ್ಲಿ ಅರ್ಥವಿದೆ ಎಂದರು.
ಒಂದೇ ಖುರ್ಚಿ: ವೇದಿಕೆ ಕಾರ್ಯಕ್ರಮದಲ್ಲಿ ಒಂದೇ ಒಂದು ಖುರ್ಚಿ ಇರಿಸಲಾಗಿತ್ತು. ವೇದಿಕೆ ಅಲಂಕರಿಸಿದ ಸಚಿವರು ಅಕ್ಕ ಪಕ್ಕದಲ್ಲಿ ಯಾವುದೇ ಖುರ್ಚಿ ಇಲ್ಲದಿರುವುದನ್ನು ಕಂಡು ವೇದಿಕೆಗೆ ಅಹ್ವಾನಿಸಿದರು. ಈ ಸಂದರ್ಭದಲ್ಲಿ ಒಂದೇ ಖುರ್ಚಿಯ ಬಗ್ಗೆ ವಿಶ್ಲೇಷಿಸಿದ ಕಾರ್ಯಕರ್ತರು, ನಾಯಕರಿಗೆ ಹಾಸನ ಜಿಲ್ಲೆಯಲ್ಲಿ ನಿಮ್ಮ ಮಟ್ಟದ ಯಾವ ನಾಯಕನೂ ಇಲ್ಲ. ನಿಮ್ಮ ಜೊತೆ ವೇದೀಕೆ ಹಂಚಿಕೊಳ್ಳುವ ಸರಿ ಸಮಾನದ ನಾಯಕತ್ವ ಜಿಲ್ಲೆಯಲ್ಲಿ ಯಾರು ಬೆಳೆಸಿಲ್ಲ. ಈ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆದಿದ್ದರೆ ಯು.ಟಿ. ಖಾದರ್, ಮೊಹಿದ್ದಿನ್ ಬಾವ ಇರುತ್ತಿದ್ದರು. ಚಿಕ್ಕ ಮಗಳೂರಿನಲ್ಲಿ ಸಗಿರ್ ಅಹಮ್ಮದ್ ಇರುತ್ತಿದ್ದರು. ಕೊಡಗಿನಲ್ಲಿ ಹಸನಬ್ಬ ಇರುತ್ತಿದ್ದರು. ಮೈಸೂರಿನಲ್ಲಿ ತನ್ವೀರ್ ಸೇಟ್, ತುಮಕೂರಿನಲ್ಲಿ ಉಬೇದುಲ್ಲ ಶರೀಫ್, ರೆಹಮಾನ್ ಖಾನ್ ಹೀಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾವು ನಾಯಕರನ್ನು ಕಾಣಬಹುದು. ಆದರೆ ಹಾಸನ ಜಿಲ್ಲೆಯಲ್ಲಿ ಮಾತ್ರ ನಾಯಕತ್ವ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ಒಂದು ಖುರ್ಚಿಯನ್ನು ಇರಿಸಲಾಗಿದೆ ಎಂದರು.
ತಾವು ಒಬ್ಬ ನಾಯಕರನ್ನು ಬೆಳಸಿ. ನಿಮ್ಮ ಪಕ್ಕದಲ್ಲಿ ಸ್ಥಾನ ಅಲಂಕರಿಸುವ ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು.







