ಸರಕಾರ ರಚನೆಗೆ ಆರ್‌ಜೆಡಿ ಹಕ್ಕು ಮಂಡನೆ: ಲಾಲು

ಪಾಟ್ನಾ, ಜು.26: ನಿತೀಶ್ ಅವರ ಹಠಾತ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್, ತಮ್ಮದು ಸದನದಲ್ಲಿ ಅತಿ ದೊಡ್ಡ ಪಕ್ಷವಾಗಿದ್ದು ಸರಕಾರ ರಚನೆಯ ಹಕ್ಕನ್ನು ಮಂಡಿಸಲಿದೆಯೆಂದು ಹೇಳಿದ್ದಾರೆ. ನಿತೀಶ್ ಭ್ರಷ್ಟಾಚಾರಕ್ಕಿಂತಲೂ ಕೆಟ್ಟದಾದ ಕೊಲೆಯ ಕಳಂಕವನ್ನು ಹೊಂದಿದ್ದಾರೆ. ಆದರೆ ತಮ್ಮ ಪಕ್ಷವು ಯಾವತ್ತೂ ಆ ವಿಷಯವನ್ನು ಪ್ರಸ್ತಾಪಿಸಿಲ್ಲವೆಂದು ಲಾಲು ಕಟುವಾಗಿ ಹೇಳಿದ್ದಾರೆ. ರಾಜಕೀಯದಲ್ಲಿ ತಾನು ಉಳಿಯಲು ಸಾಧ್ಯವಿಲ್ಲವೆಂಬ ಅರಿತು ಬಿಜೆಪಿ ಹಾಗೂ ಆರೆಸ್ಸೆಸ್ ಜೊತೆ ನಿತೀಶ್ ಕೈಜೋಡಿಸಿದ್ದಾರೆಂದು ಅವರು ವ್ಯಂಗ್ಯವಾಡಿದರು. ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕೆಂದು ನಿತೀಶ್ , ಯಾವತ್ತೂ ಆಗ್ರಹಿಸಿರಲಿಲ್ಲವೆಂದು ಲಾಲು ಸ್ಪಷ್ಟಪಡಿಸಿದರು.
Next Story





