ಉಡುಪಿ: ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಉಡುಪಿ, ಜು.26: ಸರಕಾರಿ ಸಂಯುಕ್ತ ಪ್ರೌಢಶಾಲೆ ಅಜ್ಜರಕಾಡು ಇಲ್ಲಿನ 8ನೇ ತರಗತಿ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ನೀಡಿದ ಸೈಕಲ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿತರಿಸಿದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ, ಸದಸ್ಯರಾದ ಗೋಪಾಲ್ ಶೆಟ್ಟಿ, ಮಾಕ್ಸಿ ಕುಂದರ್, ಅಶೋಕ್ ಆಚಾರ್ಯ ಕಪ್ಪೆಟ್ಟು, ದುರ್ಗಾ ಪ್ರಸಾದ್ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಮಂಜುನಾಥ್, ಶಾಲಾ ಮುಖ್ಯೋಪಾಧ್ಯಾಯ ಆಶಾ ಟಿ., ಹಿರಿಯ ಸಹ ಶಿಕ್ಷಕಿ ಕುಸುಮಾ ಭಂಡಾರಿ ಉಪಸ್ಥಿತರಿದ್ದರು.
Next Story





