ಕಾರ್ಗಿಲ್ ಹುತಾತ್ಮರ ನಮನ

ಮಂಗಳೂರು, ಜು.26: ಕಾರ್ಗಿಲ್ ವಿಜಯ ದಿವಸದ ಸಂಭ್ರಮದ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಜೀವಗಳನ್ನೇ ಬಲಿದಾನಗೈದು ದೇಶರಕ್ಷಣೆ ಮಾಡಿದ ಭಾರತೀಯ ವೀರಯೋಧರಿಗೆ ನಗರದ ಕದ್ರಿ ಪಾರ್ಕ್ ಬಳಿಯ ಹುತಾತ್ಮರ ಸ್ಮಾರಕದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಲಾಯಿತು.
ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಲಯನ್ಸ್ ಜಿಲ್ಲೆ 317-ಡಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಸಾರ್ವಜನಿಕರು ಸೇರಿ ಹುತಾತ್ಮರ ಸ್ಮಾರಕದಲ್ಲಿ ಪುಷ್ಪನಮನ ಸಲ್ಲಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷ ಮುಖ್ಯ ಸಚೇತಕ, ಮಾಜಿ ಸೈನಿಕ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಕ್ರಮ ದತ್ತ, ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಕರ್ನಲ್ ಎನ್.ಶರತ್ ಭಂಡಾರಿ, ಬ್ರಿಗೇಡಿಯರ್ ಐ.ಎನ್.ರೈ, ಕರ್ನಲ್ ಪೇಟ್ಕರ್ ಮೊದಲಾದವರು ಉಪಸ್ಥಿತರಿದ್ದರು.
Next Story





