ಕೋಮು ಹಿಂಸಾಚಾರದಲ್ಲಿ ಉ.ಪ್ರ. ಪ್ರಥಮ

ಹೊಸದಿಲ್ಲಿ, ಜು. 26: ಕಳೆದ ಮೂರು ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಒಟ್ಟು 450 ಕೋಮು ಹಿಂಸಾಚಾರ ಘಟನೆಗಳು ನಡೆದಿವೆ. ಇದರಲ್ಲಿ 162 ಘಟನೆಗಳು 2016ರಲ್ಲಿ ನಡೆದಿದೆ ಎಂದು ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಲಾಯಿತು.
ಉತ್ತರಪ್ರದೇಶದಲ್ಲಿ 2015ರಲ್ಲಿ 155 ಘಟನೆಗಳು ಹಾಗೂ 2014ರಲ್ಲಿ 133 ಘಟನೆಗಳು ಸಂಭವಿಸಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜೆಜು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ 270 ಘಟನೆಗಳು ವರದಿಯಾಗಿವೆ. 2016ರಲ್ಲಿ 68, 2015ರಲ್ಲಿ 105, 2014ರಲ್ಲಿ 97 ಘಟನೆಗಳು ನಡೆದಿವೆ. ಮಧ್ಯಪ್ರದೇಶದಲ್ಲಿ ಕಳೆದ ಕಳೆದ ಮೂರು ವರ್ಷಗಳಲ್ಲಿ 205 ಘಟನೆಗಳು ವರದಿಯಾಗಿವೆ. 2016ರಲ್ಲಿ 57, 2015ರಲ್ಲಿ 92, 2014ರಲ್ಲಿ 56 ಘಟನೆಗಳು ನಡೆದಿವೆ.
ರಾಜಸ್ತಾನದಲ್ಲಿ ಕಳೆದ ಮೂರು ವರ್ಷಗಳಲ್ಲಿ 200 ಘಟನೆಗಳು ವರದಿಯಾಗಿವೆ. 2016ರಲ್ಲಿ 63, 2015ರಲ್ಲಿ 65 ಹಾಗೂ 2014ರಲ್ಲಿ 72 ಘಟನೆಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ.
Next Story





