ಕಟ್ಟಡದಿಂದ ಬಿದ್ದು ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ
ಕಾಸರಗೋಡು, ಜು. 26: ಕಟ್ಟಡದ ಮೇಲಂತಸ್ತಿನಿಂದ ಬಿದ್ದು ಸರಕಾರಿ ನೌಕರನೋರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಕಾಸರಗೋಡು ನಗರದ ಅಶ್ವಿನಿ ನಗರದಲ್ಲಿ ನಡೆದಿದೆ.
ಮೃತರನ್ನು ಕಾಸರಗೋಡು ಶಿಕ್ಷಣ ಇಲಾಖಾ ಕಚೇರಿ ಉದ್ಯೋಗಿ, ತಲಶೇರಿಯಾ ಗಿರಿಧರ್ (45) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಮಾಯಿಪ್ಪಾಡಿ ಡಯಟ್ ನ ಕ್ಲರ್ಕ್ ಕಾಞ೦ಗಾಡ್ ನ ಪ್ರತಿಷ್ ( 35) ಗಂಭೀರ ಗಾಯಗೊಂಡವರು ಎಂದು ತಿಳಿದುಬಂದಿದೆ.
ರಾತ್ರಿ 8.50 ರ ಸುಮಾರಿಗೆ ಘಟನೆ ನಡೆದಿದೆ. ಅಶ್ವಿನಿ ನಗರದಲ್ಲಿ ಈ ಘಟನೆ ನಡೆದಿದೆ. ಇವರು ಇಲ್ಲಿನ ಟೂರಿಸ್ಟ್ ಹೋಮ್ ನಲ್ಲಿ ಕೊಠಡಿ ಪಡೆದಿದ್ದರು. ಕೊಠಡಿಯಿಂದ ಇಬ್ಬರು ಹೊರಬಂದಿದ್ದು, ಒಂದನೇ ಅಂತಸ್ತಿನ ಬಾಲ್ಕನಿಯಲ್ಲಿ ಒರಗಿ ನಿಂತು ಮಾತನಾಡುತ್ತಿದ್ದಾಗ ಇಬ್ಬರು ಆಕಸ್ಮಿಕವಾಗಿ ಬಿದ್ದಿದ್ದು,
ಕೂಡಲೇ ಅಲ್ಲಿದ್ದವರು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ಗಿರಿಧರ್ ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





