Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಜಿತ್ ಪಿಳ್ಳೈ ಹೇಳದೇ ಉಳಿದ ಸುದ್ದಿಯ...

ಅಜಿತ್ ಪಿಳ್ಳೈ ಹೇಳದೇ ಉಳಿದ ಸುದ್ದಿಯ ಕತೆಗಳು...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ27 July 2017 12:24 AM IST
share
ಅಜಿತ್ ಪಿಳ್ಳೈ ಹೇಳದೇ ಉಳಿದ ಸುದ್ದಿಯ ಕತೆಗಳು...

 ಪತ್ರಿಕೋದ್ಯಮವನ್ನು ಗಂಭೀರವಾಗಿ ತೆಗೆದುಕೊಂಡವರು ಅಜಿತ್ ಪಿಳ್ಳೈ ಹೆಸರನ್ನು ಕೇಳಿಯೇ ಕೇಳಿರುತ್ತಾರೆ. ಪ್ರಮುಖ ಪತ್ರಿಕೆಗಳಾದ ಸಂಡೇ ಅಬ್ಸರ್ವರ್, ದಿ ಇಂಡಿಯನ್ ಪೋಸ್ಟ್, ದಿ ವೀಕ್, ದಿ ಪಯೋನೀರ್, ಇಂಡಿಯಾ ಟುಡೇಗಳಲ್ಲಿ ಕೆಲಸ ಮಾಡಿದ್ದಲ್ಲದೆ, ವಿನೋದ್ ಮೆಹ್ತಾ ಜೊತೆಗೂಡಿ ಔಟ್‌ಲುಕ್ ವಾರಪತ್ರಿಕೆಯನ್ನು ಮುನ್ನಡೆಸಿದವರು. 2012ರಲ್ಲಿ ಔಟ್‌ಲುಕ್ ಪತ್ರಿಕೆಯಿಂದ ನಿರ್ಗಮಿಸಿದ ಬಳಿಕ ಕನ್ನಡ ದಿನಪತ್ರಿಕೆಗಳಲ್ಲೂ ಅಂಕಣಗಳನ್ನು ಬರೆದವರು. ‘ಇದು ಯಾವ ಸೀಮೆಯ ಚರಿತ್ರೆ?’ ಕೃತಿಯಲ್ಲಿ ಅಜಿತ್ ಪಿಳ್ಳೈ ಅವರು ತಮ್ಮ ವೃತ್ತಿ ಸಂಬಂಧದ ಓಡಾಟದಲ್ಲಿ ಕಂಡದ್ದನ್ನು ಕಂಡ ಹಾಗೆ ನಿರೂಪಿಸಿದ್ದಾರೆ. ಪತ್ರಕರ್ತ ಸತೀಶ್ ಜಿ. ಟಿ. ಈ ಬರಹವನ್ನು ಆಕರ್ಷಕವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯನ್ನು ಓದುತ್ತಾ ಹೋದಂತೆ ಬಾಬರಿ ಮಸೀದಿ ಧ್ವಂಸದ ಆನಂತರ ಏಳುವ ಗಲಭೆ, ಸಾವು, ನೋವು, ಯಾವ ಹೊತ್ತಿಗೆ ಏನಾದರೂ ಆಗಬಹುದು ಎಂಬ ಆತಂಕದ ಕ್ಷಣಗಳಲ್ಲಿ ಬೀದಿ ಬೀದಿ ಅಲೆದು ವರದಿ ಸಂಗ್ರಹಿಸುವ ಅಜಿತ್ ಅವರೊಳಗಿನ ಪತ್ರಕರ್ತನ ದಿಟ್ಟತನ, ಬದ್ಧತೆ ಮತ್ತು ಕಾಳಜಿಗಳು ಅವರ ವೃತ್ತಿ ಜೀವನದುದ್ದಕ್ಕೂ ಕಿಂಚಿತ್ತೂ ಮುಕ್ಕಿಲ್ಲದೆ ಮುಂದುವರಿಯುವುದನ್ನು ಮತ್ತು ಈ ದೇಶದ ದಿಕ್ಕನ್ನೇ ಬದಲಿಸಿದ ಹಲವು ಹತ್ತು ಘಟನೆಗಳು ಮತ್ತು ಘಳಿಗೆಗಳನ್ನು ತನ್ನ ವರದಿಗಾರಿಕೆಯ ಮೂಲಕ ಕಟ್ಟಿಕೊಡುವುದನ್ನು ಕಾಣಬಹುದು. ಹಲವು ಹಗರಣಗಳು ಹೇಗೆ ಅವರ ವರದಿಗಾರಿಕೆಯ ಮೂಲಕವೇ ಹೊರಬೀಳುವಂತಾಯಿತು, ಅದರ ಆನಂತರ ಪರಿಣಾಮಗಳೇನು ಎನ್ನುವುದನ್ನು ಈ ಕೃತಿಯ ಮೂಲಕ ನಾವು ಅರಿಯಬಹುದಾಗಿದೆ. ಒಬ್ಬ ಪತ್ರಕರ್ತನ ಆತ್ಮವೃತ್ತಾಂತ ಪರೋಕ್ಷವಾಗಿ ಸಮಾಜದ ಆತ್ಮವೃತ್ತಾಂತವಾಗಿ ವಿಸ್ತಾರಗೊಳ್ಳುವುದನ್ನು ಈ ಕೃತಿಯಲ್ಲಿ ನಾವು ಕಾಣಬಹುದು. ಸಮಾಜವನ್ನು ಕಟ್ಟುವಲ್ಲೂ, ಒಡೆಯುವಲ್ಲೂ ಅವನ ಪಾತ್ರವೆಷ್ಟು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ಇಲ್ಲಿರುವ ಎಲ್ಲ ಬರಹಗಳಿಗೂ ಒಂದು ಕಥನಗುಣವಿದೆ. ಈ ಕಾರಣದಿಂದಲೇ ಎಲ್ಲ ಅಧ್ಯಾಯಗಳೂ ನಮ್ಮನ್ನು ಕುತೂಹಲದಿಂದ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಪತ್ರಿಕೋದ್ಯಮಕ್ಕೆ ಕಾಲಿಟ್ಟ ಯುವ ಪತ್ರಕರ್ತರು ಅವಶ್ಯವಾಗಿ ಓದಬೇಕಾದ ಕೃತಿಯಿದು. ಪತ್ರಕರ್ತನ ಜವಾಬ್ದಾರಿಯನ್ನು ಈ ಕೃತಿ ಜಾಗೃತಿಗೊಳಿಸುತ್ತದೆ. ಹಾಗೆಯೇ ಸಮಾಜವನ್ನು ನೋಡುವ ನಮ್ಮ ದೃಷ್ಟಿಯನ್ನು ಬದಲಿಸುವ ಶಕ್ತಿ ಈ ಕೃತಿಗಿದೆ. ಕೃತಿಯ ಕುರಿತಂತೆ ದೇಶದ ಖ್ಯಾತ ಪತ್ರಕರ್ತ ವಿನೋದ್ ಮೆಹ್ತಾ ಅವರು ಹೀಗೆ ಬರೆಯುತ್ತಾರೆ ‘‘ನನಗಂತೂ ಇಲ್ಲಿಯ ಪುಟಗಳನ್ನು ಓದುವುದೆಂದರೆ ನನ್ನದೇ ನೆನಪಿನ ಓಣಿಯಲ್ಲಿ ಓಡಾಡಿದಂತೆ. ಜೊತೆಗೆ ನಾನು ಅದೆಷ್ಟು ಬಾರಿ ಗಂಭೀರ ಹಾಗೂ ಕ್ಷುಲ್ಲಕ ಸುದ್ದಿಗಳನ್ನು ಅಜಿತ್‌ನಿಂದ ಬರೆಸಿದ್ದೇನೆ ಎನ್ನುವುದು ನೆನಪಾಗುತ್ತದೆ. ಪೂಜಾಬೇಡಿಯ ಬಿಕಿನಿ ಮಾರಾಟದಿಂದ ಹಿಡಿದು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಸರಕಾರ ಹೇಳಿದ ಸುಳ್ಳುಗಳವರೆಗೆ. ಪಂಚತಾರ ಒಬೆರಾಯ್ ಹೊಟೇಲ್‌ನಲ್ಲಿ 150 ರೂ. ಗಳ ಫ್ರೆಂಚ್ ಊಟದ ಬಗ್ಗೆ ರಿವ್ಯೆ ಬರೆಯಲು ಹೇಳಿದ್ದರಿಂದ ಹಿಡಿದು ಸಣ್ಣಪುಟ್ಟದ್ದಕ್ಕೂ ದೊಡ್ಡ ತಗಾದೆ ತೆಗೆಯುವ ಕಾದಂಬರಿಕಾರ ವಿ. ಎಸ್. ನೈಪಾಲ್‌ರನ್ನು ಮುಂಬೈನ ಬೀದಿಗಳಿಗೆ ಕರೆದೊಯ್ಯಲು ಹೇಳಿದ್ದರವರೆಗೆ. ಚೆನ್ನೈನಲ್ಲಿ ಒಂದು ಕಿಡ್ನಿ ಕೊಳ್ಳುವುದರಿಂದ ಹಿಡಿದು ಮುಂಬೈನ ರೆಡ್‌ಲೈಟ್ ಏರಿಯಾದಲ್ಲಿ ವೇಶ್ಯೆಯರೊಂದಿಗೆ ಮಾತನಾಡಲು ಹೇಳುವ ತನಕ....’’ ಅವರ ಮಾತುಗಳೇ ಈ ಕೃತಿಯ ವಿಸ್ತಾರವನ್ನು, ಸ್ವಾರಸ್ಯವನ್ನು ವಿವರಿಸುತ್ತದೆ. ಅಹರ್ನಿಶಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ ರೂ. 270. ಆಸಕ್ತರು 9449174662 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X