ರಾಜ್ಯಮಟ್ಟದ ಕ್ರೀಡಾಪಟು, ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಮೂಡುಬಿದಿರೆ,ಜು.27: ರಾಜ್ಯಮಟ್ಟದ ಬ್ಯಾಡ್‍ಮಿಂಟನ್ ಕ್ರಿಡಾಪಟು, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಕಾವ್ಯ (16) ವಿದ್ಯಾಗಿರಿಯ ಹಾಸ್ಟೆಲ್‍ನಲ್ಲಿ ಜು.20ರ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆ ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಎಂಬವರ ಪುತ್ರಿ.
ಪರೀಕ್ಷೆಯೊಂದರಲ್ಲಿ ಕಡಿಮೆ ಅಂಕ ಪಡೆದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ವಿದ್ಯಾರ್ಥಿನಿ ಈ ಕೃತ್ಯ ಎಸಗಿರುವುದಾಗಿ ಮೂಡುಬಿದಿರೆ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿದುಬಂದಿದೆ.
ಎಫ್‍ಎ1 ಪರೀಕ್ಷೆಯಲ್ಲಿ ಹಿಂದಿಯಲ್ಲಿ ನಿರೀಕ್ಷಿಸಿದ ಅಂಕ ಬರಲಿಲ್ಲ ಎಂದು ಈಕೆ ಬೇಸರಗೊಂಡಿದ್ದು ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





