ದೀಕ್ಷಾ ರಾಮಕೃಷ್ಣ ಸರಿಗಮಪ ಸ್ಪರ್ಧೆಯ ಫೈನಲ್‌ಗೆ

ಉಡುಪಿ, ಜು.27: ಉಡುಪಿಯ ಬಹುಮುಖ ಪ್ರತಿಭೆ ದೀಕ್ಷಾ ರಾಮಕೃಷ್ಣ ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಸ್ಪರ್ಧೆಯ 13ನೆ ಆವೃತ್ತಿಯ ಫೈನಲ್ ಹಂತಕ್ಕೆ ತಲುಪಿದ್ದಾರೆ ಎಂದು ಉಡುಪಿ ಹೆಜ್ಜೆಗಜ್ಜೆ ನೃತ್ಯ ಸಂಸ್ಥೆಯ ನಿರ್ದೇಶಕ ಹಾಗೂ ದೀಕ್ಷಾ ಅವರ ತಂದೆ ಡಾ.ರಾಮಕೃಷ್ಣ ಹೆಗಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜು.30ರಂದು ಸಂಜೆ 6 ಗಂಟೆಗೆ ನಡೆಯುವ ಫೈನಲ್ ಸ್ಪರ್ಧೆಯಲ್ಲಿ ದೀಕ್ಷಾ ರಾಮಕೃಷ್ಣಗೆ ಡಿಇಇಕೆ ಎಂದು ಟೈಪ್ ಮಾಡಿ 57575ಕ್ಕೆ ಎಸ್‌ಎಂಎಸ್ ಮಾಡುವ ಮೂಲಕ ಮತ ಹಾಕಿ ಗೆಲ್ಲಿಸುವಂತೆ ವಿನಂತಿಸಿಕೊಂಡರು. ಇವರು ಈ ಹಿಂದೆ ಈಟಿವಿಯ ಎದೆ ತುಂಬಿ ಹಾಡಿದೆನು ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಬಹುಮಾನ ಪಡೆದಿದ್ದರು. ಇವರು ಸುಗಮ ಸಂಗೀತ ದಲ್ಲಿ ಮಂಗಳೂರು ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ. ಪ್ರಸ್ತುತ ಇವರು ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟೆಕ್ ಸ್ನಾತ ಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
Next Story





