ಮಾರ್ಪಳ್ಳಿ: ಆಟಿಡೊಂಜಿ ದಿನ ಕಾರ್ಯಕ್ರಮ

ಉಡುಪಿ, ಜು.27: ಮಾರ್ಪಳ್ಳಿ ಗೆಳೆಯರ ಬಳಗದ ಮಹಿಳಾ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಇತ್ತೀಚೆಗೆ ಸಂಘದ ಗೌರವಾಧ್ಯಕ್ಷೆ ಅನುರಾಧ ಉದಯ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಗೆಳೆಯರ ಬಳಗದ ಅಧ್ಯಕ್ಷ ಪಾಂಡುರಂಗ ನಾಯ್ಕ ಮಾತನಾಡಿ, ಹಿಂದಿನ ಕಾಲದ ಕಷ್ಟದ ದಿನಗಳನ್ನು ಯುವ ಪೀಳಿಗೆಗೆ ನೆನೆಪಿಸಿ ಕೊಡಲು ಆಟಿಡೊಂಜಿ ದಿನ ಕಾರ್ಯಕ್ರಮವು ಸೂಕ್ತವಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲಿ ನಡೆದು ತುಳುನಾಡಿನ ಆಚಾರ ವಿಚಾರ ಗಳು ಯುವ ಪೀಳಿಗೆ ಆಚರಿಸಿಕೊಂಡು ಬರುವಂತಾಗಬೇಕೆಂದರು.
ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರಮೀಳಾ ಸುರೇಶ, ಸಂಘದ ಹಿರಿಯ ಸದಸ್ಯರಾದ ರಮೇಶ ಮಾರ್ಪಳ್ಳಿ, ವಿಜಯ್ ನಾಯಕ್, ವಸಂತ್ ಶೆಟ್ಟಿಗಾರ್, ಕೊರಂಗ್ರಪಾಡಿ ಸಿ.ಎ.ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿ ವಿಜಯಲಕ್ಷ್ಮೀ ದೇವಾ ಡಿಗ, ಅಂಗನವಾಡಿ ಶಿಕ್ಷಕಿ ಯಶೋಧ ಉಪಸ್ಥಿತರಿದ್ದರು.
Next Story





