ಬೀಡಿ ಕಾರ್ಮಿಕರ ಮೇಲಿನ ದಾಳಿಗೆ ಖಂಡನೆ
ಉಡುಪಿ, ಜು.27: ಬೀಡಿ ಕಾರ್ಮಿಕರ ಸಮ್ಮೇಳನ ಮುಗಿಸಿ ತುಮಕೂರಿಗೆ ತೆರಳುತ್ತಿದ್ದ ವಾಹನದ ಮೇಲೆ ಸಂಘಪರಿವಾರದ ಕಾರ್ಯಕರ್ತರು ಶಿರಾಡಿ ಸಮೀಪದ ಅಡ್ಡಿಹೊಳೆಯಲ್ಲಿ ನಡೆಸಿದ ದಾಳಿಯನ್ನು ಉಡುಪಿ ಜಿಲ್ಲಾ ಸೋಶಿ ಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸಿದೆ.
ಮಹಿಳಾ ಕಾರ್ಮಿಕರ ಮೇಲಿನ ದಾಳಿಯು ಅತ್ಯಂತ ಅಮಾನವೀಯ ಮತ್ತು ಪೈಶಾಚಿಕ ಕೃತ್ಯವಾಗಿದೆ. ಇಂತಹ ಗೂಂಡಾ ಪಡೆಗಳನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಹದ್ದು ಬಸ್ತಿನಲ್ಲಿಟ್ಟು, ಇವರ ವಿರುಧ್ದ ಸೂಕ್ತ ಕಾನೂನು ಕ್ರಮಗಳನ್ನು ಕೆಗೊಳ್ಳಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇ ಶ್ವರ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Next Story





