ಲಾರಿ ಡಿಕ್ಕಿ: ಮಹಿಳೆ ಮೃತ್ಯು

ಪಡುಬಿದ್ರಿ,ಜು.27: ಬಸ್ಸು ಕಾಯುತ್ತಿದ್ದ ಮಹಿಳೆಯೊರ್ವರಿಗೆ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಡಾ ಎರ್ಮಾಳು ಕಲ್ಯಾಣಿ ಬಾರ್ ಬಳಿ ಸಂಭವಿಸಿದೆ.
ಹೆಜಮಾಡಿ ಮಾರುತಿ ರಸ್ತೆಯ ನಿವಾಸಿ ಜಾನಕಿ ಎಸ್ ಕೊಟ್ಯಾನ್ (60) ಎಂಬವರೆ ಮೃತಪಟ್ಟ ಮಹಿಳೆ. ಇವರು ಕಲ್ಯಾಣಿ ಬಾರ್ ಪಕ್ಕದ ಬಸ್ಸು ನಿಲ್ದಾಣದ ಬಳಿ ಬಸ್ಸು ಕಾಯುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಜಾನಕಿಯವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ತಕ್ಷಣ ಪಡುಬಿದ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದರು. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





