ನಿತೀಶ್-ಬಿಜೆಪಿ ಮೈತ್ರಿಗೆ ನನ್ನ ಆತ್ಮಸಾಕ್ಷಿ ಒಪ್ಪದು; ಜೆಡಿಯು ಸಂಸದ ಅನ್ವರ್ ಆಲಿ
ಜೆಡಿಯುನಲ್ಲಿ ಒಡಕು

ಪಾಟ್ನ, ಜು.27: ಬಿಹಾರದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸರಕಾರ ರಚಿಸುವ ಜೆಡಿಯು ಮುಖಂಡ ನಿತೀಶ್ ಕುಮಾರ್ ನಿರ್ಧಾರಕ್ಕೆ ಪಕ್ಷದ ಹಲವರಿಂದ ವಿರೋಧ ವ್ಯಕ್ತವಾಗಿದೆ. ತನ್ನ ಆತ್ಮಸಾಕ್ಷಿಯ ಕರೆಯಂತೆ ನಿತೀಶ್ ಬಿಜೆಪಿ ಜೊತೆಗಿನ ಮೈತ್ರಿಯ ನಿರ್ಧಾರಕ್ಕೆ ಬಂದಿರಬಹುದು. ಆದರೆ ಈ ಮೈತ್ರಿಯನ್ನು ಬೆಂಬಲಿಸಲು ನನ್ನ ಆತ್ಮಸಾಕ್ಷಿ ಒಪ್ಪದು ಎಂದು ಬಿಹಾರದ ಜೆಡಿಯು ಸಂಸದ ಅನ್ವರ್ ಆಲಿ ಹೇಳಿದ್ದಾರೆ.
ಅವಕಾಶ ದೊರೆತರೆ ಪಕ್ಷದ ಸದಸ್ಯರಿಗೆ ತನ್ನ ದೃಷ್ಠಿಕೋನವನ್ನು ತಿಳಿಸುವುದಾಗಿ ಹೇಳಿದ ಆಲಿ, ಸಿದ್ಧಾಂತದಲ್ಲಿ ಭಿನ್ನತೆ ಇರುವ ಕಾರಣ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿಯೊಂದಿಗೆ ಜೆಡಿಯು ಸಖ್ಯ ಕಳೆದುಕೊಂಡಿತ್ತು. ಈ ಸೈದ್ಧಾಂತಿಕ ಭಿನ್ನತೆ ಈಗಲೂ ಇದೆ. ನಿಜ ಹೇಳಬೇಕೆಂದರೆ, ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿವೆ ಎಂದರು.
Next Story





