ಸರಕಾರಿ ಕಾರ್ಯಕ್ರಮಗಳು ರದ್ದು
ಉಡುಪಿ, ಜು.27: ರಾಜ್ಯದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿಧನದ ಪ್ರಯುಕ್ತ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯನ್ನು ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ.
ನಾಳೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಬೇಕಿದ್ದ ಘನ ಮತ್ತು ದ್ರವ ಸಂಪನ್ಮೂಲ (ತ್ಯಾಜ್ಯ) ನಿರ್ವಹಣೆ (ಎಸ್‌ಎಲ್‌ಆರ್‌ಎಂ) ಕುರಿತು ಸ್ವಸಹಾಯ ಸಂಘದ ಸದಸ್ಯರಿಗೆ ಆರು ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ರದ್ದು ಪಡಿಸಲಾಗಿದೆ.
ಅದೇ ರೀತಿ ಜು.29ರಂದು ಪುರಭವನದಲ್ಲಿ ನಡೆಯಬೇಕಿದ್ದ ವಿಕಲಚೇತನ ರಿಗೆ ಉಚಿತ ಸಾಧನ ಸಲಕರಣೆ ವಿತರಿಸುವ ಕಾರ್ಯಕ್ರಮವನ್ನೂ ಶೋಕಾಚರಣೆ ಪ್ರಯುಕ್ತ ರದ್ದುಪಡಿಸಲಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್‌ನ ಉಡುಪಿ ಶಾಖೆಯ ಪ್ರಕಟಣೆ ತಿಳಿಸಿದೆ.
Next Story





