ಮತ್ತೆ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಅರುಂಧತಿ ರಾಯ್
ಲಂಡನ್, ಜು. 27: ಈ ವರ್ಷದ ಕಾದಂಬರಿ ವಿಭಾಗದ ‘ಮ್ಯಾನ್ ಬೂಕರ್ ಪ್ರಶಸ್ತಿ’ಯ ಸ್ಪರ್ಧಿಗಳ ಪಟ್ಟಿಯಲ್ಲಿ ಹಿಂದೊಮ್ಮೆ ಪ್ರಶಸ್ತಿ ಪಡೆದಿರುವ ಅರುಂಧತಿ ರಾಯ್ ಇದ್ದಾರೆ.
1997ರಲ್ಲಿ ‘ದ ಗಾಡ್ ಆಫ್ ಸ್ಮಾಲ್ ತಿಂಗ್ಸ್’ ಕೃತಿಗಾಗಿ ಪ್ರಶಸ್ತಿ ಗೆದ್ದಿರುವ ಅರುಂಧತಿ, ಈ ಬಾರಿ ತನ್ನ ಎರಡನೆ ಕಾದಂಬರಿ ‘ದ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್’ನೊಂದಿಗೆ ಮತ್ತೊಮ್ಮೆ ಸ್ಪರ್ಧೆಯಲ್ಲಿದ್ದಾರೆ.
ಪ್ರಕಾಶಕರು ಸಲ್ಲಿಸಿದ ಒಟ್ಟು 144 ಕಾದಂಬರಿಗಳ ಪೈಕಿ 13 ಕಾದಂಬರಿಗಳನ್ನು ಗುರುವಾರ ಆಯ್ಕೆ ಮಾಡಲಾಯಿತು.
ಪಟ್ಟಿಯಲ್ಲಿ ‘‘ಭಾರೀ ತೀವ್ರತೆ, ಕಲ್ಪನೆ ಮತ್ತು ವೈವಿಧ್ಯತೆ’’ಗಳನ್ನೊಳಗೊಂಡ ಪುಸ್ತಕಗಳಿವೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷೆ ಹಾಗೂ ಸಾಹಿತ್ಯ ವಿಮರ್ಶಕಿ ಲೋಲಾ ಯಂಗ್ ಹೇಳಿದರು.
Next Story