Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಾರಾಹಿ: ಸಂತ್ರಸ್ಥರಿಗೆ ಇನ್ನೂ...

ವಾರಾಹಿ: ಸಂತ್ರಸ್ಥರಿಗೆ ಇನ್ನೂ ಮರೀಚಿಕೆಯಾದ ಪರಿಹಾರ: ಉಸ್ತುವಾರಿ ಸಚಿವರು ಕೆಂಡ

ದೂರುದಾರರಿಲ್ಲದೇ ನಡೆದ ಪ್ರಗತಿ ಪರಿಶೀಲನಾ ಸಭೆ

ವಾರ್ತಾಭಾರತಿವಾರ್ತಾಭಾರತಿ27 July 2017 9:24 PM IST
share
ವಾರಾಹಿ: ಸಂತ್ರಸ್ಥರಿಗೆ ಇನ್ನೂ ಮರೀಚಿಕೆಯಾದ ಪರಿಹಾರ: ಉಸ್ತುವಾರಿ ಸಚಿವರು ಕೆಂಡ

ಕುಂದಾಪುರ, ಜು.27: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಕುಂದಾಪುರ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ವಾರಾಹಿ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ದೂರುದಾರರು ಯಾರೂ ಉಪಸ್ಥಿತರಿರದೇ, ಕೇವಲ ಇಲಾಖಾ ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದು, ಅವರ ಸಮಜಾಯಿಷಿಯನ್ನಷ್ಟೇ ಸಭೆ ಆಲಿಸ ಬೇಕಾಯಿತು.

ಕಳೆದ ಜೂನ್ ಮೂರರಂದು ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಲೋಪದೋಷಗಳನ್ನು ಖುದ್ದಾಗಿ ವೀಕ್ಷಿಸಿ, ಜನರ ಅಹವಾಲುಗ ಳನ್ನು ಆಲಿಸಿ ಬಳಿಕ ಹೊಸಂಗಡಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂತ್ರಸ್ಥರಿಂದ, ಸಾರ್ವಜನಿಕರಿಂದ ಪಡೆದ ಅಹವಾಲು, ದೂರು ಅರ್ಜಿಗಳ ಕುರಿತಂತೆ ಕೈಗೊಳ್ಳಲಾದ ಕ್ರಮ, ಆದ ಪ್ರಗತಿಯ ಪರಿಶೀಲನೆಗೆ ಕರೆಯಲಾದ ಇಂದಿನ ಸಭೆಗೆ ಸಂತ್ರಸ್ಥರು ಹಾಗೂ ದೂರುದಾರರನ್ನೇ ಆಹ್ವಾನಿಸಿರಲಿಲ್ಲ.
    
ಮರು ತನಿಖೆಗೆ ಸೂಚನೆ:  ಮೊಳಹಳ್ಳಿ ಗ್ರಾಮದ ರಾಮಚಂದ್ರ ಮೆಂಡನ್ ಎಂಬವರ ಮನೆ ವಾರಾಹಿ ಎಡದಂಡೆ ಕಾಲುವೆಯ 23ಕಿ.ಮೀ. ವ್ಯಾಪ್ತಿಯಲ್ಲಿದ್ದು, ಸ್ಪೋಟಕ ಬಳಸಿ ಕಲ್ಲುಬಂಡೆ ಸಿಡಿಸಿದ್ದರಿಂದ ಮನೆ ಹಾನಿಗೊಂಡಿದ್ದು, ಅದಕ್ಕೆ ಪರಿಹಾರ ನೀಡುವಂತೆ ಕೋರಿದ್ದರು. ಆದರೆ ಈ ಬಗ್ಗೆ ಎನ್‌ಐಟಿಕೆ ಸುರತ್ಕಲ್ ತಾಂತ್ರಿಕ ತಂಡ ಹಾಗೂ ಆರಕ್ಷಕ ಇಲಾಖೆ ಸ್ಥಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾಗಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.

ಈ ಬಗ್ಗೆ ಸಭೆಯಲ್ಲಿದ್ದ ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ರೀತಿ ಎಷ್ಟು ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಸಲಾಗಿದೆ ಎಂದು ಸಚಿವರ ಪ್ರಶ್ನೆಗೆ ಕುಂದಾಪುರ ಡಿವೈಎಸ್ಪಿ ಅವರು ಮೂರು ಪ್ರಕರಣಗಳೆಂದು ತಿಳಿಸಿದರು. ಈ ಮೂರು ಪ್ರಕರಣದ ಕುರಿತಂತೆ ಬೇರೆ ತಜ್ಞರಿಂದ ಮರು ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು.

ಕ್ರಿಮಿನಲ್ ಅಪರಾಧ:   
ವಾರಾಹಿ ಯೋಜನೆಗೆ ಸಂಬಂದಪಟ್ಟ ಸಾರ್ವಜನಿಕರ ದೂರುಗಳು, ಭೂ ಸ್ವಾಧೀನ ಕುರಿತ ದೂರುಗಳು ಹಾಗೂ ಸೂಕ್ತ ಪರಿಹಾರ ಇನ್ನೂ ಸಿಗದ ಎಲ್ಲಾ ಪ್ರಕರಣಗಳನ್ನು ಯಾವುದೇ ಹಂತದಲ್ಲಿದ್ದರೂ ಒಂದು ವಾರದೊಳಗೆ ಇತ್ಯರ್ಥ ಪಡಿಸುವಂತೆ ಹಾಗೂ ಅಧಿಕಾರಿಗಳು ತಮ್ಮಲ್ಲಿಗೆ ಬಂದ ಸಾರ್ವಜನಿಕರ ಅರ್ಜಿಗಳು ವಿಲೇವಾರಿಯಾಗುವವರೆಗೂ ಕಾರ್ಯೊನ್ಮುಖರಾಗುವಂತೆ ಸಚಿವರು ಸೂಚಿಸಿದರು.

ಯಡ್ಯಾಡಿ-ಮತ್ಯಾಡಿ ಗ್ರಾಮದ ರಾಧಾಕೃಷ್ಣ ಶೆಟ್ಟಿ ಎಂಬವರ ಜಮೀನನ್ನು ಕಾನೂನು ಬಾಹಿರವಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ದೂರಿಗೆ ಉತ್ತರಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರು, ಇವರ 2.5 ಸೆನ್ಸ್ ಜಾಗ ಭೂಸ್ವಾದೀನ ಪಡಿಸಿದ್ದು 18 ಲಕ್ಷ ರೂ. ಪರಿಹಾರ ದೊರಕಿದೆ. ಅದರಲ್ಲಿದ್ದ ಮನೆ, ಬಾವಿ, ಶೆಡ್ಡಿಗೆ ಪರಿಹಾರ ನೀಡಿಲ್ಲ ಎಂಬುದು ಅವರ ತಕರಾರು. ಅದರ ವೌಲ್ಯಮಾಪನ ನಡೆದಿದ್ದು, ಶೀಘ್ರವೇ ಪರಿಹಾರ ನೀಡಲಾಗುವುದು ಎಂದರು.

ರಸ್ತೆ ತಡೆ ತೆರವುಗೊಳಿಸಿ: ಹಾರ್ದಳ್ಳಿ- ಮಂಡಳ್ಳಿ ಬಳಿ ವಾರಾಹಿ ಯೋಜನೆಯಡಿ ನಿರ್ಮಿಸಲಾಗಿರುವ ಸರ್ವಿಸ್ ರಸ್ತೆಗೆ ಕೆಲವರು ಅಕ್ರಮವಾಗಿ ಬೇಲಿ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿರುವ ಕುರಿತಂತೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ 24 ಗಂಟೆ ಯೊಳಗೆ ಬೇಲಿ ತೆರವುಗೊಳಿಸಿ, ಸಂಬಂಪಟ್ಟವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋಟಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸಚಿವರು ಸೂಚಿಸಿದರು.

ವಾರಾಹಿ ಯೋಜನೆಯಿಂದ 15,000 ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ್ದರೂ ಕಳೆದ 37 ವರ್ಷದಲ್ಲಿ ಕೇವಲ 4,100 ಹೆಕ್ಟೇರ್‌ಗೆ ಮಾತ್ರ ನೀರು ಒದಗಿಸಲಾಗಿದೆ. ಹಲವು ಗ್ರಾಮಗಳಿಗೆ ಇನ್ನೂ ನೀರಾವರಿ ಸೌಲ್ಯ ದೊರೆತಿಲ್ಲ.ಯಾವ್ಯಾವ ಗ್ರಾಮಗಳಿಗೆ ವಾರಾಹಿ ನೀರು ಸಿಗುತ್ತದೆ ಎಂಬ ಬಗ್ಗೆ ಸ್ಪಷ್ಟಪಡಿಸುವಂತೆ ಗ್ರಾಮಸ್ಥರು ಕೋರಿದರು.

ಮುಂದಿನ ಸಭೆ ಅ.28ಕ್ಕೆ: 
ವಾರಾಹಿ ಯೋಜನೆಯಲ್ಲಿ ಇದುವರೆಗೆ ಬಾಕಿ ಇರುವ ಪ್ರಕರಣ ಮತ್ತು ಇಂದು ಸ್ವೀಕರಿಸಿದ ಪ್ರಕರಣಗಳನ್ನು ಅ.28ರಂದು ಕರೆಯಲಾಗುವ ಮುಂದಿನ ಪ್ರಗತಿ ಪರಿಶೀಲನಾ ಸಭೆಯ ಮುಂದಿರಿಸುವಂತೆ ಪ್ರಮೋದ್ ಸೂಚಿಸಿದರು. ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ನಿಧನದ ಪ್ರಯುಕ್ತ ಸಂತಾಪ ಸೂಟಿಸಿ ಒಂದು ನಿಮಿಷದ ವೌನಾಚರಣೆ ನಡೆಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

 ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಬಾಗಾಧಿಕಾರಿ ಶಿಲ್ಪಾನಾಗ್ ಹಾಗೂ ವಾರಾಹಿ ಯೋಜನೆಯ ಎಸ್‌ಇ ಪದ್ಮನಾಭ್ ಉಪಸ್ಥಿತರಿದ್ದರು.


ಗೀತಾಲಕ್ಷ್ಮಿಅಮ್ಮನ ಬದುಕಿನ ಗೋಳು

ಸಭೆಯಲ್ಲಿ ಉಪಸ್ಥಿತರಿದ್ದ 74 ಉಳ್ಳೂರು ಗ್ರಾಮದ ನಿವಾಸಿ ಗೀತಾಲಕ್ಷ್ಮಿ ಅಮ್ಮ ವಾರಾಹಿ ಯೋಜನೆಯಿಂದ ತಮಗಾದ ಗೋಳಿನ ಸಂಕಟ ಹೇಳಿ ಕೊಂಡರು. ನಮ್ಮ ಜಾಗದ ಸಮೀಪ 1.20ಕಿ.ಮೀ. ಉದ್ದದ ವಾರಾಹಿ ಟನಲ್ ಹಾದು ಹೋಗುತ್ತಿದೆ. ಇದು ನೆಲ ಮಟ್ಟದಿಂದ 30ಮೀ.ಆಳದಲ್ಲಿದೆ. ಇದರಿಂದ ಬೇಸಿಗೆಯಲ್ಲಿ ನಮ್ಮ ಜಾಗದ ಬಾವಿ, ಪಂಪ್‌ಸೆಟ್ ಹಾಗೂ ಬೋರ್‌ವೆಲ್‌ಗಳು ಸಂಪೂರ್ಣ ಒಣಗಿ ಹೋಗುತ್ತಿವೆ ಎಂದರು.
 

ನಮ್ಮ ಕುಟುಂಬದಲ್ಲಿ ಆರು ಮಂದಿಗೆ ಒಟ್ಟು ಏಳು ಎಕರೆ ಜಾಗವಿದ್ದು, ಅದರಲ್ಲಿ 1.5 ಎಕರೆಯಲ್ಲಿ ತೋಟ ಮಾಡಿ ಅಡಿಕೆ ಬೆಳೆಸಿದ್ದೇವೆ. ಆದರೆ ಈಗ ಬೇಸಿಗೆಯಲ್ಲಿ ನಮ್ಮ ಬಾವಿಯಲ್ಲಿ ನೀರೇ ಇಲ್ಲವಾಗಿದೆ. ಕುಡಿಯಲು ಸಹ ನೀರಿಲ್ಲ. ನಾವು ಹೇಗೆ ಬದುಕಬೇಕು ಹೇಳಿ. ಈ ನೋಟು ಅಮಾನ್ಯದಿಂದ ನಮ್ಮಂಥ ಹಳ್ಳಿಗರನ್ನು ಕೊಂದೇ ಹಾಕಿದ್ದಾರೆ ಎಂದವರು ಗೋಳು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಮುಖ್ಯ ಇಂಜಿನಿಯರ್ ಪದ್ಮನಾಭ್ ಅವರು ಉಳ್ಳೂರಿ ನಿಂದ 4.5 ಕಿಮೀ ದೂರ ಇರುವ ವಾರಾಹಿ ಹೊಳೆಯಿಂದ ಪೈಪ್‌ಲೈನ್ ಮೂಲಕ ನೀರು ಒದಗಿಸಲು 50 ಲಕ್ಷ ರೂ.ಗಳ ಕಾಮಗಾರಿ ಅನುಮೋದನೆಗೆ ಸಲ್ಲಿಸಲಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಮುಖ್ಯ ಇಂಜಿನಿಯರ್ ಪದ್ಮನ್ಾ ಅವರು ಉಳ್ಳೂರಿನಿಂದ 4.5 ಕಿಮೀ ದೂರ ಇರುವ ವಾರಾಹಿ ಹೊಳೆಯಿಂದ ಪೈಪ್‌ಲೈನ್‌ ಎಡದಂಡೆ ಕಾಲುವೆಯಲ್ಲಿ ನೀರು ಬಿಡುವ ಬಗ್ಗೆ ಅನಿಶ್ಚತತೆ ಇದೆ. ನೀರು ಬಿಡುವ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುವಂತೆ ಹಾಗೂ ಬಾಕಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ರೈತರು ಕೋರಿಕೆ ಸಲ್ಲಿಸಿದರು. ಎಡದಂಡೆ ಕಾಲುವೆಯಲ್ಲಿ ನೀರು ಬಿಡುವ ಬಗ್ಗೆ ಅನಿಶ್ಚತತೆ ಇದೆ. ನೀರು ಬಿಡುವ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುವಂತೆ ಹಾಗೂ ಬಾಕಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ರೈತರು ಕೋರಿಕೆ ಸಲ್ಲಿಸಿದರು. ಎಡದಂಡೆಯಲ್ಲಿ 30ರಿಂದ 38ಕಿ.ಮೀ.ನಲ್ಲಿ ಕಾಮಗಾರಿ ನಡೆಯುತ್ತಿದೆ. 8ಕಿ.ಮೀ.. ಕಾಮಗಾರಿಯಲ್ಲಿ 4.5 ಕಿ.ಮೀ.. ಕಾಮಗಾರಿ ಮುಗಿದಿದೆ. ಇಲ್ಲಿ ಏಳು ವಿತರಣಾ ಕಾಲುವೆ ಕಾಮಗಾರಿ ನಡೆಯುತ್ತಿದೆ. ಇದಾದರೆ ಅಸೋಡು ತನಕ ನೀರು ಬರುತ್ತದೆ. ಇದಾದ ಬಳಿಕ 38ರಿಂದ 44 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಇದರೊಂದಿಗೆ ಎಡದಂಡೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಹಾಗೂ ತೆಕ್ಕಟ್ಟೆಯವರೆಗೆ ನೀರು ಬರುತ್ತದೆ ಎಂದು ಇಂಜಿನಿಯರ್‌ಗಳು ಉತ್ತರಿಸಿದರು.

ಎಡದಂಡೆಯಲ್ಲಿ 30ರಿಂದ 38ಕಿ.ಮೀ.ನಲ್ಲಿ ಕಾಮಗಾರಿ ನಡೆಯುತ್ತಿದೆ. 8ಕಿ.ಮೀ.. ಕಾಮಗಾರಿಯಲ್ಲಿ 4.5 ಕಿ.ಮೀ.. ಕಾಮಗಾರಿ ಮುಗಿದಿದೆ. ಇಲ್ಲಿ ಏಳು ವಿತರಣಾ ಕಾಲುವೆ ಕಾಮಗಾರಿ ನಡೆಯುತ್ತಿದೆ. ಇದಾದರೆ ಅಸೋಡು ತನಕ ನೀರು ಬರುತ್ತದೆ. ಇದಾದ ಬಳಿಕ 38ರಿಂದ 44 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಇದರೊಂದಿಗೆ ಎಡದಂಡೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಹಾಗೂ ತೆಕ್ಕಟ್ಟೆಯವರೆಗೆ ನೀರು ಬರುತ್ತದೆ ಎಂದು ಇಂಜಿನಿಯರ್‌ಗಳು ಉತ್ತರಿಸಿದರು. ಬಲದಂಡೆ ಯೋಜನೆಯಲ್ಲಿ 70 ಎಕ್ರೆ ಅರಣ್ಯ ಭೂಮಿ ಇದ್ದು, ಇದಕ್ಕೆ ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ದೊರೆತಲ್ಲಿ ಬಲದಂಡೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X