ಮಾಜಿ ಸೇನಾನಿ ಎಂ.ನಾರಾಯಣ್
ಉಳ್ಳಾಲ, ಜು. 26: ಸೋಮೇಶ್ವರ ಬಳಿಯ ನಿವಾಸಿ ಮಾಜಿ ಸೇನಾನಿ ಎಂ.ನಾರಾಯಣ್ (85) ಶುಕ್ರವಾರ ಮುಂಜಾನೆ ನಿಧನರಾದರು.
ನಾರಾಯಣ್ 1971ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿದ್ದರು. ಅವರು ಸೇನೆಯಲ್ಲಿ 34 ವರ್ಷ ಸೇವೆ ಸಲ್ಲಿಸಿದ್ದರು.
ರಕ್ತೇಶ್ವರಿ ದೈವಸ್ಥಾನದ ಸಕ್ರಿಯ ಸೇವಕರಾಗಿದ್ದು, ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂರು ವರ್ಷ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story





 12345.jpg.jpg)

