ಬಂಟ್ವಾಳ: ಎನ್ನೆಸ್ಸೆಸ್ ಉದ್ಘಾಟನೆ

ಬಂಟ್ವಾಳ, ಜು. 28: ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ನಕಾರಾತ್ಮಕ ಅಂಶಗಳನ್ನೇ ಅಳವಡಿಸಿಕೊಳ್ಳುವುದರಿಂದ ನಿರ್ದಿಷ್ಟ ಗುರಿಗಳನ್ನು ಮುಟ್ಟಲು ವಿಫಲರಾಗುತ್ತಿದ್ದಾರೆ. ಕಲಿಕೆಯ ಜೊತೆಯಲ್ಲಿ ಕ್ರೀಡೆ, ಸಾಹಿತ್ಯ, ಪರಿಸರ ಮೊದಲಾದ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಪೂರ್ಣವಾಗಲು ಸಾಧ್ಯ ಎಂದು ತುಂಬೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಎನ್.ಗಂಗಾಧರ ಆಳ್ವ ಅಭಿಪ್ರಾಯಪಟ್ಟರು.
ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಇಲ್ಲಿನ ಪ್ರಸಕ್ತ ವರ್ಷದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಾಹಿತ್ಯ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತಾನಾಡುತ್ತಿದ್ದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಎಸ್‌ವಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಸಾಹಿತ್ಯದ ಓದು ಒಬ್ಬ ವ್ಯಕ್ತಿಯನ್ನು ಬಹುಮುಖಿ ಚಿಂತನೆಯ ಕಡೆಗೆ ಸೆಳೆಯುತ್ತದೆ. ಇದರಿಂದ ಸಮಾಜದ ಸರಿ-ತಪ್ಪುಗಳ ವಿಮರ್ಶೆ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಬರೆಯುವ ಮೊದಲು ಓದಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸತೀಶ್ ಕುಲಾಲ್ ಹಾಗೂ ಲತೀಫ್ ಖಾನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಸರಸ್ವತಿ ಬಿ.ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕಾ ಕೆ. ಹಾಗೂ ಸಾಹಿತ್ಯ ಸಂಘದ ನಿರ್ದೇಶಕ ದಾಮೋದರ ಇ. ಸಂಘಗಳ ಚಟುವಟಿಕೆಗಳನ್ನು ಕುರಿತು ಮಾಹಿತಿ ನೀಡಿದರು. ಹಿರಿಯ ಉಪನ್ಯಾಸಕ ಯುಸುಫ್ ಸ್ವಾಗತಿಸಿದರು. ಅಬ್ದುಲ್ ರಝಾಕ್ ಧನ್ಯವಾದ ನೀಡಿದರು. ಕನ್ನಡ ಉಪನ್ಯಾಸಕಿ ಯಶೋಧ.ಕೆ ಕಾರ್ಯಕ್ರಮ ಸಂಯೋಜಿಸಿದರು.







