ತಿರುಪತಿಗೆ ಪಾದ ಯಾತ್ರೆ

ಕುಂದಾಪುರ, ಜು.28: ಕಳೆದ ಹಲವು ವರ್ಷಗಳಿಂದ ಕಾಲ್ನಡಿಗೆಯಲ್ಲಿ ತಿರುಪತಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವ ಖ್ಯಾತ ಉದ್ಯಮಿ ಲಕ್ಷ್ಮೀ ನಾರಾಯಣ ರಾವ್ ಮತ್ತು ಶ್ರೀಧರ ಪಿ.ಎಸ್. ನೇತೃತ್ವದ ಸುಮಾರು ನೂರಕ್ಕೂ ಮಿಕ್ಕಿದ ಭಕ್ತರ ತಂಡ ನಿನ್ನೆ ಬೆಳಗ್ಗೆ ಕಾಲ್ಮಡಿಗೆಯಲ್ಲಿ ತಿರುಪತಿ ಯಾತ್ರೆಗೆ ಸಾಲಿಗ್ರಾಮದಿಂದ ಹೊರಟಿದೆ.
ದಿನವೊಂದಕ್ಕೆ ಸುಮಾರು 40ರಿಂದ 50 ಕಿ.ಮಿ. ಸಂಚರಿಸುವ ಈ ತಂಡದಲ್ಲಿ ಕುಮಟಾ, ಅಂಕೋಲ, ಹೊನ್ನಾವರ ಸೇರಿದಂತೆ ಕೊಲ್ಲೂರಿನ ಭಕ್ತಾಧಿಗಳು ಭಾಗವಹಿಸುತ್ತಿದ್ದು, ಕುಂದಾಪುರ ಚಿಕನ್‌ಸಾಲ್ ನಿವಾಸಿಗಳಾದ ಪ್ರಶಾಂತ ಮೇಲ್ಮನೆ, ವೆಂಕಟೇಶ್(ಟಿಂಕು), ಶರತ್ ಸೇರಿದಂತೆ ಹಲವರಿದ್ದಾರೆ. ಸುಮಾರು ಹದಿನೆಂಟು ದಿನಗಳಲ್ಲಿ ತಿರುಪತಿಯನ್ನು ತಲಪುವ ಗುರಿಯನ್ನಿರಿಸಿಕೊಳ್ಳಲಾಗಿದೆ ಎಂದು ಯಾತ್ರಿಗಳು ತಿಳಿಸಿದ್ದಾರೆ.
Next Story





