ಜುಗಾರಿ ಅಡ್ಡೆಗೆ ದಾಳಿ: ನಾಲ್ವರು ಬಂಧನ
ಮಂಗಳೂರು, ಜು. 28: ನಗರದ ಕೊಟ್ಟಾರ ನಮೃತಾ ಬಿಲ್ಡಿಂಗ್‌ನ ಎರಡನೇ ಮಹಡಿಯಲ್ಲಿರುವ ಜುಗಾರಿ ಅಡ್ಡೆಗೆ ಉರ್ವಾ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಅಶೋಕನಗರದ ನಿವಾಸಿಗಳಾದ ಭರತ್ (26), ರಂಜಿತ್ (37), ಕೊಟ್ಟಾರಚೌಕಿಯ ಸಂಗಪ್ಪ (27), ಕಾವೂರಿನ ಪುರುಷೋತ್ತಮ (40) ಬಂಧಿತ ಆರೋಪಿಗಳು. ಇವರಿಂದ ಆಟಕ್ಕೆ ಬಳಸಿದ್ದ 6,800 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





