ಮನೆಗೆ ನುಗ್ಗಿ ಕಳವು
ಮಲ್ಪೆ, ಜು.28: ಮೂಡುತೋನ್ಸೆ ಎಡಬೆಟ್ಟು ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮೂಡುತೋನ್ಸೆ ಎಡಬೆಟ್ಟು ರಸ್ತೆಯ ನಿವಾಸಿ ಹರಿಪ್ರಕಾಶ್ ಜು.26ರಂದು ಮನೆಗೆ ಬೀಗ ಹಾಕಿ ಅಂಬಾಗಿಲಿಗೆ ಹೋಗಿದ್ದು, ಜು.27ರಂದು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತು. ಮನೆಯ ಮುಖ್ಯ ದ್ವಾರದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, 24ಸಾವಿರ ರೂ. ಮೌಲ್ಯದ ಒಟ್ಟು 15 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು, ಒಂದು ಚಿನ್ನದ ಸರ, ಎರಡು ಕಿವಿಯೋಲೆ ಯನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





