ಚೀನಾ ಶ್ರೀಮಂತಗೊಳ್ಳುತ್ತಿದೆ: ಅಧ್ಯಕ್ಷ ಜಿನ್‌ಪಿಂಗ್

ಬೀಜಿಂಗ್, ಜು. 28: ಚೀನಾವು ಶ್ರೀಮಂತಗೊಳ್ಳುತ್ತಿದೆ ಹಾಗೂ ಶಕ್ತಿಶಾಲಿಯಾಗುತ್ತಿದೆ ಎಂದು ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ತನ್ನ ಐದು ವರ್ಷಗಳ ಮೊದಲ ಅವಧಿಯನ್ನು ಮುಗಿಸಿ ಎರಡನೆ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದನ್ನು ಎದುರುನೋಡುತ್ತಿರುವ ಜಿನ್‌ಪಿಂಗ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷವು ಸುದೀರ್ಘ ಸಮಯದಿಂದ ಪರಿಹರಿಸಲು ಬಯಸುತ್ತಿದ್ದ, ಆದರೆ ಸಾಧ್ಯವಾಗದ ಹಲವಾರು ಸವಾಲಿನ ಸಮಸ್ಯೆಗಳನ್ನು ಕಳೆದ ಐದು ವರ್ಷಗಳ ಅವಧಿಯಲ್ಲಿ ಬಗೆಹರಿಸಲಾಗಿದೆ ಎಂದರು.
Next Story





