ನಟಿ ಅಪಹರಣ ಪ್ರಕರಣ: ನಾಪತ್ತೆಯಾದ ಮೊಬೈಲ್‌ಗೆ ಪೊಲೀಸರಿಂದ ಶೋಧ

ಕೊಚ್ಚಿ, ಜು. 28: ಪ್ರಥಮ ಮಾಹಿತಿ ವರದಿ ಸಲ್ಲಿಸಲು ಪೊಲೀಸರು ವಿಫಲವಾದ ಹಿನ್ನೆಲೆಯಲ್ಲಿ ದಿಲೀಪ್ ವಿರುದ್ಧ ಜ್ಯಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಕೂಡ ವಿಫಲವಾಗಿದೆ.
ನಟಿ ಅಪಹರಣ ಹಾಗೂ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ದಿಲೀಪ್ ಆಲುವಾ ಕಾರಾಗೃಹದಲ್ಲಿದ್ದಾರೆ. ದಿಲೀಪ್‌ನ ಅಸ್ಪಷ್ಟ ಹಣಕಾಸು ವ್ಯವಹಾರ ಹಾಗೂ ಭೂಸ್ವಾಧೀನದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಔಪಚಾರಿಕ ವಿನಂತಿ ಮಾಡಿದ ಎರಡು ವಾರಗಳ ಬಳಿಕವೂ ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿಲ್ಲ.
ಮೊಬೈಲ್ ಫೋನ್ ನಾಪತ್ತೆ
ನಟಿಯ ಲೈಂಗಿಕ ಕಿರುಕುಳದ ಸಂದರ್ಭ ದೃಶ್ಯಗಳನ್ನು ಚಿತ್ರೀಕರಿಸಲು ಬಳಸಿದ ಮೊಬೈಲ್ ನಾಪತ್ತೆಯಾಗಿದ್ದು, ಅದನ್ನು ಪತ್ತೆ ಮಾಡಲು ಪೊಲೀಸರು ಶೋಧ ಆರಂಭಿಸಿದ್ದಾರೆ. ದಿಲೀಪ್‌ನ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಕೋರಿ ಕೂಡಾ ಜ್ಯಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ನಟಿಯ ಲೈಂಗಿಕ ಕಿರುಕುಳದ ಸಂದರ್ಭ ಚಿತ್ರೀಕರಣಕ್ಕೆ ಬಳಸಲಾದ ಮೊಬೈಲ್ ಅನ್ನು ವಿದೇಶಕ್ಕೆ ಸಾಗಿಸಲಾಗಿದೆ ಎಂಬ ಬಗೆಗಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಫೆಬ್ರವರಿ 17ರ ಬಳಿಕದ ಅವಧಿಯಲ್ಲಿ ದಿಲೀಪ್‌ಗೆ ಆತ್ಮಿಯರಾದ ಹಲವರು ವಿದೇಶಕ್ಕೆ ತೆರಳಿದ್ದಾರೆ.
ಈ ಮೊಬೈಲ್ ಫೋನನ್ನು ನಾಶಪಡಿಸಲಾಗಿದೆ ಎಂದು ಪ್ರಧಾನ ಆರೋಪಿ ಪಲ್ಸರ್ ಸುನಿಯ ಪರ ವಕೀಲ ಪ್ರತೀಶ್ ಚಾಕೋ ಪೊಲೀಸರಿಗೆ ತಿಳಿಸಿದ್ದಾರೆ. ಅವರ ಕಿರಿಯ ವಕೀಲ ಕೂಡ ಈ ಪ್ರತಿಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ.







