ವಿಮಾನ ಟಿಕೆಟ್‌ಗೆ ಆಧಾರ್ ಕಡ್ಡಾಯ ಮಾಡುವ ಚಿಂತನೆ ಇಲ್ಲ

ಹೊಸದಿಲ್ಲಿ, ಜು. 28: ವಿಮಾನ ಟಿಕೇಟ್ ಕಾಯ್ದಿರಿಸುವಿಕೆಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡುವ ಚಿಂತನೆ ಕೇಂದ್ರ ಸರಕಾರಕ್ಕೆ ಇಲ್ಲ ಎಂದು ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಹುದ್ದೆಗೆ ನಿಯೋಜಿತ ರಾಜೀವ್ ಗೌಬಾ ಅವರ ನೇತೃತ್ವದ ಅಧಿಕಾರಿಗಳು ಗುರುವಾರ ಸಂಸದರ ಗುಂಪೊಂದಕ್ಕೆ ತಿಳಿಸಿದೆ.
ಆಧಾರ ಅಂಕಿ-ಅಂಶ ಸುರಕ್ಷಿತ. ಮಾಹಿತಿಗಳು ಇನ್ನೊಬ್ಬರ ಕೈಗೆ ಹೋಗುವ ಅವಕಾಶವೇ ಇಲ್ಲ. ಮುಖ್ಯ ಸರ್ವರ್ ಅನ್ನು ಪೂರ್ಣಪ್ರಮಾಣದ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಸಂಸತ್ ಸದಸ್ಯರಿಗೆ ಅಧಿಕಾರಿಗಳು ಭರವಸೆ ನೀಡಿದರು.
ಪಿ. ಚಿದಂಬರಂ ನೇತೃತ್ವದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಸಂಬಂಧ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಭೆಗೆ ಹಾಜರಾಗಿದ್ದ ಸಂಸದರಿಗೆ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸತ್ ಸದಸ್ಯರ ಪ್ರಶ್ನೆಗೆ ಗೃಹ ಸಚಿವಾಲಯದ ಪ್ರತಿನಿಧಿಗಳು ಹಾಗೂ ಯುಐಡಿಎಐ, ಆಧಾರ್‌ನ ನೋಡಲ್ ಅಧಿಕಾರಿಗಳು ಈ ಪ್ರತಿಕ್ರಿಯೆ ನೀಡಿದರು.
ಆಧಾರ್ ಅಂಕಿ-ಅಂಶಗಳನ್ನು ಖಾಸಗಿ ಸಂಸ್ಥೆಗಳು ಸಂಗ್ರಹಿಸುತ್ತಿರುವುದರಿಂದ ನಾಗರಿಕರ ಖಾಸಗೀತನವನನು ಹೇಗೆ ರಕ್ಷಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಸಂಪೂರ್ಣ ಸಾಫ್ಟ್‌ವೇರ್ ಅನ್ನು ಯುಐಡಿಎಐ ನಿರ್ವಹಿಸುತ್ತದೆ ಹಾಗೂ ಅಧಾರ್ ಅಂಕಿ-ಅಂಶ ಇನ್ನೊಬ್ಬರ ಕೈಗೆ ಹೋಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಖಾಸಗೀತನಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ಬಂದ ಮೇಲೆ ಆಧಾರ್‌ಗೆ ಸಂಬಂಧಿಸಿದ ಖಾಸಗೀತನದ ವಿಷಯಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಸದರಿಗೆ ಅಧಿಕಾರಿಗಳು ತಿಳಿಸಿದರು.







