ಮನೋಜ್ ಕುಮಾರ್ ಫೈನಲ್‌ಗೆ
ಝೆಕ್ ಬಾಕ್ಸಿಂಗ್ ಟೂರ್ನಿ

ಹೊಸದಿಲ್ಲಿ, ಜು.28: ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮನೋಜ್ ಕುಮಾರ್(69 ಕೆಜಿ), ಶಿವ ಥಾಪ ಸಹಿತ ಭಾರತದ ನಾಲ್ವರು ಬಾಕ್ಸರ್‌ಗಳು ಝೆಕ್ ಗಣರಾಜ್ಯದಲ್ಲಿ ನಡೆಯುತ್ತಿರುವ ಗ್ರಾನ್‌ಪ್ರಿ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಸತೀಶ್ ಕುಮಾರ್(+91ಕೆಜಿ) ಹಾಗೂ ಮನೀಶ್ ಪನ್ವಾರ್(81ಕೆಜಿ) ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ತಲುಪಿದ ಭಾರತದ ಇನ್ನಿಬ್ಬರು ಬಾಕ್ಸರ್‌ಗಳಾಗಿದ್ದಾರೆ.
ಸತೀಶ್ ಝೆಕ್ ಗಣರಾಜ್ಯದ ಆಡಮ್ ಕೊಲಾರಿಕ್‌ರನ್ನು ಮಣಿಸಿದರೆ, ಮನೀಶ್ ಸ್ಥಳೀಯ ಫೇವರಿಟ್ ಕಾಮಿಲ್ ಹ್ಲಾಡ್ಕಿ ಅವರನ್ನು ಮಣಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಆರ್ಟೆಮ್ ಹಾರ್ಟುನ್ಯೂಮನ್ ವಿರುದ್ಧ ಸೋತಿರುವ ಆಶೀಷ್ ಕುಮಾರ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಇದಕ್ಕೂ ಮೊದಲು ನಡೆದಿದ್ದ ಪುರುಷರ 60 ಕೆಜಿ ತೂಕ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ಶಿವ ಥಾಪ ಫೈನಲ್‌ಗೆ ಪ್ರವೇಶಿಸಿದ್ದಾರೆ.
Next Story





