ಪುತ್ತರಿರ ಎಂ.ನಂಜಪ್ಪಗೆ ಬೆಸ್ಟ್ ಕೆಡೆಟ್ ಪ್ರಶಸ್ತಿ

ಮಡಿಕೇರಿ ಜು.29 : ಕಳೆದ ಸಾಲಿನ ನವೆಂಬರ್‌ನಲ್ಲಿ ನಡೆದ ಮಂಗಳೂರು ವಿಭಾಗದ ಎನ್‌ಸಿಸಿಯ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಚೆಟ್ಟಳ್ಳಿಯ ಪುತ್ತರಿರ ಎಂ.ನಂಜಪ್ಪ ಬೆಸ್ಟ್ ಕೆಡೆಟ್ ಪ್ರಶಸ್ತಿ ಪಡೆದಿದ್ದಾರೆ.
ಕೊಡಗು ವಿದ್ಯಾಲಯದ ಎನ್.ಸಿ.ಸಿ. ಆಫೀಸರ್ ಮೇಜರ್ ದಾಮೋದರ್ ರವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ 19ನೇ ಬೆಟಾಲಿಯನ್ ಎನ್.ಸಿ.ಸಿಯ ಕರ್ನಲ್ ಸಂಜಯ್ ಆಪ್ಟೆಯವರಿಂದ ಜು.26ರಂದು 4,500ರೂ.ಗಳನ್ನು ನಗದು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನವೋದಯದಲ್ಲಿ ನಡೆದ ರಾಷ್ಟ್ರ ಮಟ್ಟದ ಎನ್.ಸಿ.ಸಿ.ಯ ರೈಫಲ್ ಶೂಟಿಂಗ್ ಕ್ಯಾಂಪ್‌ನಲ್ಲಿ ಪಾಲ್ಗೊಂಡಿರುವ ನಂಜಪ್ಪ ಅವರು ಚೆಟ್ಟಳ್ಳಿ ನಿವಾಸಿ ಪುತ್ತರಿರ ರಾಜೇಶ್ ಮುತ್ತಪ್ಪ ಹಾಗೂ ವನಿತಾರವರ ಪುತ್ರರಾಗಿದ್ದಾರೆೆ.
Next Story





