Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮನೆಯಲ್ಲಿ ಬ್ರಹ್ಮಚಾರಿ ಆತ್ಮದ ಕಾಟ...

ಮನೆಯಲ್ಲಿ ಬ್ರಹ್ಮಚಾರಿ ಆತ್ಮದ ಕಾಟ...

ನರೇಂದ್ರ ನಾಯಕ್ ಜೀವನ ಕಥನ

ನಿರೂಪಣೆ: ಸತ್ಯಾ ಕೆ.ನಿರೂಪಣೆ: ಸತ್ಯಾ ಕೆ.29 July 2017 6:16 PM IST
share
ಮನೆಯಲ್ಲಿ ಬ್ರಹ್ಮಚಾರಿ ಆತ್ಮದ ಕಾಟ...

ಭಾಗ- 6

ಭೂತ, ಪ್ರೇತ, ಆತ್ಮಗಳ ಕಾಟ ಅಂತಿಥದ್ದಲ್ಲ ಬಿಡಿ. ಸಣ್ಣ ಮಕ್ಕಳಿಂದ ಹಿಡಿದು ಅದೆಷ್ಟೋ ಗಟ್ಟಿವಂತರನ್ನೂ ಬಲಹೀನರನ್ನಾಗಿಸುತ್ತದೆ ಈ ಭೂತ, ಪ್ರೇತಗಳು, ಅದನ್ನು ನಂಬಿದವರನ್ನು. ಅಂತಹದೊಂದು ವಿಚಿತ್ರ ಘಟನೆ ನನ್ನ ಸ್ನೇಹಿತನಿಗೆ ಸಂಬಂಧಿಸಿದ್ದು. ಆತನ ಹೆಸರು ಸುರೇಶ್. ಬುದ್ಧಿವಂತ ಯುವಕ. ಹೆತ್ತವರಿಗೆ ಒಬ್ಬನೇ ಮಗ. ಪದವಿ ಮುಗಿದ ಬಳಿಕ ಆತ ಇಂಜನಿಯರಿಂಗ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ದುಃಖಕರ ಸಂಗತಿಯೆಂದರೆ ಆತ ಅಪಘಾತವೊಂದರಲ್ಲಿ ಮೃತಪಟ್ಟ. ಆದರೆ ಆತ ಮೃತಪಟ್ಟ ಬಳಿಕ ಆತನ ಆತ್ಮ ಮಾತ್ರ ಆತನ ಕುಟುಂಬಿಕರಿಗೆ ತೊಂದರೆ ಕೊಡಲಾರಂಭಿಸಿತು.

1987, ,ಸುರೇಶ್ ಮೃತಪಟ್ಟ ಸುಮಾರು ಒಂದು ವರ್ಷದ ನಂತರ ಸುರೇಶ್‌ನ ಕುಟುಂಬಿಕರೊಬ್ಬರು ನಮ್ಮ ಸಂಘದವರ ಜತೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದ್ದರು. ಮನೆಯಲ್ಲಿ ವಿಚಿತ್ರವಾದ ಘಟನೆಗಳು ಅವರ ಸಮಸ್ಯೆಯಾಗಿತ್ತು. ಮನೆಯಲ್ಲಿ 13 ವರ್ಷದ ಮೊಮ್ಮಗುವಿನೊಂದಿಗೆ ಅಜ್ಜ ಅಜ್ಜಿ ವಾಸವಾಗಿದ್ದರು. ಮನೆಯಲ್ಲಿ ಆತ್ಮದ ನಿಗೂಢ ಶಕ್ತಿಗಳು ಆಗಾಗ್ಗೆ ಗೋಚರಿಸಿಕೊಂಡು ಅದೃಶ್ಯವಾಗುತ್ತಿತ್ತು. ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬೇರ್ಪಡುವುದು, ಕೆಮ್ಮಿಗೆ ಉಪಯೋಗಿಸುವ ಸಿರಪ್ ಬಾಟಲಿ ಅನ್ನದ ಪಾತ್ರೆಯಲ್ಲಿರುವುದು, ವಿಚಿತ್ರ ರೀತಿಯ ಸಂದೇಶಗಳನ್ನು ಒಳಗೊಂಡ ಪತ್ರಗಳು. ಆಧ್ಮಾತ್ಮಿಕ ಬರಹಗಳುಳ್ಳ ಪತ್ರದ ಸಂದೇಶಗಳು ಮಾತ್ರ ತೀರಾ ವಿಚಿತ್ರವಾಗಿರುತ್ತಿದ್ದವು. ಒಂದಲ್ಲಾ ಒಂದು ರೀತಿಯ ಬೇಡಿಕೆಗಳು. ವಿಚಿತ್ರವೆಂದರೆ ಆತ್ಮದ ಬೇಡಿಕೆಗಳ ಫಲಾನುಭವಿ ಮಾತ್ರ 13ರ ಹರೆಯದ ಮೊಮ್ಮಗನಾಗಿರುತ್ತಿದ್ದ!

ಆತ್ಮದ ಪತ್ರದಲ್ಲಿದ್ದ ಹಲವು ಬೇಡಿಕೆಗಳಲ್ಲಿ ಒಂದೆಂಬಂತೆ ಸೈಕಲ್ ಬೇಕೆಂಬ ಬೇಡಿಕೆ. ಅಷ್ಟು ಮಾತ್ರವಲ್ಲ ಆ ಸೈಕಲ್ ಎಲ್ಲಿ ಸಿಗುತ್ತದೆ ಮತ್ತು ಅದರ ಬಿಡಿ ಭಾಗಗಳು ಯಾವ ಅಂಗಡಿಯದ್ದು ಬೇಕು ಎಂಬ ಬಗ್ಗೆಯೂ ಆತ್ಮದ ಪತ್ರದಲ್ಲಿ ಉಲ್ಲೇಖ. ಮೊತ್ತೊಂದು ಬಾರಿ ಆ ಸೈಕಲ್‌ಗೆ ಯಾವ ರೀತಿಯ ರಿಪೇರಿ ಬೇಕು ಎಂಬುದಾಗಿತ್ತು ಮಾತ್ರವಲ್ಲ, ಯಾವ ಅಂಗಡಿಯಲ್ಲಿ ರಿಪೇರಿ ಮಾಡಬೇಕೆಂಬದನ್ನೂ ಆತ್ಮ ತನ್ನ ಪತ್ರದಲ್ಲಿ ಸೂಚಿಸಿತ್ತು.

ಈ ಎಲ್ಲಾ ಹಿನ್ನೆಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಮೇಲ್ನೋಟಕ್ಕೆ ಯಾವ ಆತ್ಮದ ಕಿತಾಪತಿ ಇದೆಂದು ಅರ್ಥವಾಗಿತ್ತು. ಆದರೆ ಈ ಸೂಕ್ಷ್ಮ ಮಾತ್ರ ಅಜ್ಜ ಅಜ್ಜಿಯರಿಗಾಗಲಿ, ನಮ್ಮಲ್ಲಿ ಸಲಹೆ ಕೇಳಲು ಬಂದವರಿಗಾಗಲಿ ಹೊಳೆದಿರಲೇ ಇಲ್ಲ. ಬದಲಾಗಿ ಆತ್ಮದ ಉಪದ್ರವ ತಾಳಲಾರದೆ ಅವರು ಮಾಂತ್ರಿಕರು, ಜ್ಯೋತಿಷ್ಯರ ಬಳಿಯೂ ಹೋಗಿದ್ದರಂತೆ. ಅವರೆಲ್ಲಾ ಇವರಿಗೆ ನೀಡಿದ ಸಲಹೆಯೆಂದರೆ, ಅದು ಬ್ರಹ್ಮಚಾರಿ ಪ್ರೇತದ ಉಪದ್ರವ ಎಂದು ಹೇಳಿ ಅವರಿಂದ ಹಣವನ್ನೂ ತೆಗೆದುಕೊಂಡು ಕೆಲವೊಂದು ಶಮನಕಾರಿ ಪರಿಹಾರಗಳನ್ನೂ ಸೂಚಿಸಿದ್ದರು. ಆದರೆ ಪ್ರೇತದ ಬಾಧೆ ಮಾತ್ರ ನಿಂತಿರಲಿಲ್ಲ.

ಈ ಬಗ್ಗೆ ನಮ್ಮ ತಂಡ ಪ್ರೇತದ ಉಪದ್ರವ ನೀಡುತ್ತಿರುವ ಅಸಲಿ ಪ್ರೇತ ಯಾರೆಂದು ಹೇಳಿದಾಗ ಮಾತ್ರ ಆ ಅಜ್ಜ ಅಜ್ಜಿ ಮಾತ್ರ ನಂಬಲೇ ಇಲ್ಲ. ಬಳಿಕ ಅಜ್ಜ ಅಜ್ಜಿಗೆ ಉಪದ್ರವ ನೀಡುತ್ತಿದ್ದ 13ರ ಹರೆಯದ ಬಾಲಕನ ಮೇಲೆ ನಿಗಾ ಇಡುವಂತೆ ಅವರಿಗೆ ಸೂಚಿಸಿದ ಮೇಲಷ್ಟೇ ಅವರಿಗೆ ನಮ್ಮ ಮಾತಿನ ಮೇಲೆ ನಂಬಿಕೆ ಬಂದಿತ್ತು. ಸಂಪ್ರದಾಯಸ್ಥ, ಹಳೆ ಚಿಂತನೆಗಳಿಂದ ಕೂಡಿದ ಅಜ್ಜ ಅಜ್ಜಿಯರಿಂದ ತನ್ನ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಬುದ್ಧಿವಂತ ಬಾಲಕ ಪ್ರೇತವೊಂದನ್ನು ಸೃಷ್ಟಿಮಾಡಿಕೊಂಡಿದ್ದ. ಆ ಪ್ರೇತ ಮಾತ್ರ ಅಪಘಾತದಲ್ಲಿ ಮೃತಪಟ್ಟ ಸುರೇಶ್‌ನದ್ದೇ ಎಂಬುವಂತೆ ಆ ಅಜ್ಜ ಅಜ್ಜಿ ನಂಬುವಂತೆಯೂ ಮಾಡಿಕೊಂಡಿದ್ದ. ತನ್ನ ತುಂಟಾಟಗಳ ಮೂಲಕ ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಾ ಆ ಬಾಲಕ ಆರಾಮದಲ್ಲಿದ್ದ. ಆದರೆ ಪ್ರೇತದ ಭಯದಿಂದ ಅಜ್ಜ ಅಜ್ಜಿ ಮಾತ್ರ ಮಾನಸಿಕ ನೆಮ್ಮದಿಯ ಜತೆಗೆ ಪ್ರೇತ ಬಿಡಿಸುವ ನೆಪದಲ್ಲಿ ಾಕಷ್ಟು ಹಣವನ್ನೂ ವ್ಯಯಿಸಿದ್ದರು.

ಬಳಿಕ ಬಾಲಕನಿಗೆ ತಿಳಿ ಹೇಳಿ ಆತನನ್ನು ಆತನ ತಂದೆ ತಾಯಿ ಬಳಿಗೆ ಕಳುಹಿಸಲಾಯಿತು. ಆ ಬಳಿಕ ಅಜ್ಜ ಅಜ್ಜಿಯರಿಗೆ ಪ್ರೇತ ಬಾಧೆಯೂ ನಿಂತಿತ್ತು.

ಹಣ ಕದಿಯುವ ಭೂತವದು....

ಅದೊಂದು ದಿನ 1988ರಲ್ಲಿ ನಮ್ಮ ತಂಡದ ಹೊಸ ಸದಸ್ಯರೊಬ್ಬರು ಕುತೂಹಲಕಾರಿ ಸುದ್ದಿಯೊಂದನ್ನು ತಂದಿದ್ದರು. ಕಿನ್ನಿಗೋಳಿ ಗ್ರಾಮದ ಕುಟುಂಬವೊಂದು ಪ್ರೇತದ ಬಾಧೆಯಿಂದ ದಿನೇ ದಿನೇ ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆಂಬುದು ಅವರಿಗೆ ದೊರೆತ ಮಾಹಿತಿಯಾಗಿತ್ತು. ಪ್ರೇತವೊಂದು ಮನೆಯವರ ಅಂಗಿಗಳ ಜೇಬಿನಿಂದ, ಲಾಕ್ ಮಾಡಿದ ಡ್ರಾವರ್‌ನಿಂದ, ಕಪಾಟಿನಿಂದ ಹಣ ಲಪಟಾಯಿಸುವ ಮೂಲಕ ಕುಟುಂಬವನು್ನ ಆರ್ಥಿಕವಾಗಿ ಬಡನತಕ್ಕೆ ತಳ್ಳಿತ್ತು.

ಕಾರ್ಪೆಂಟರ್ ಆಗಿ ವೃತ್ತಿ ಆರಂಭಿಸಿದ್ದ ಮನೆಯ ಯಜಮಾನ ಶ್ರಮ ಜೀವಿಯಾಗಿ ದುಡಿಯುತ್ತಾ, ಆತ ಕಾಂಟ್ರಾಕ್ಟರ್ ಆಗಿ ಸ್ವಲ್ಪ ಮಟ್ಟಿಗೆ ಆಸ್ತಿಯನ್ನೂ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಕೆಲ ವರ್ಷಗಳಿಂದೀಚೆಗೆ ಭಾರೀ ಪ್ರಮಾಣದಲ್ಲಿ ಅವನ ಮನೆಯಿಂದ ಹಣವನ್ನು ಪ್ರೇತವೊಂದು ಎಗರಿಸಲು ಆರಂಭಿಸಿತ್ತು. ಈ ನಷ್ಟವು ಆತನಿಗೆ ಭಾರೀ ಹೊಡೆತವನ್ನು ನೀಡಿತ್ತು. ಆತ ತನ್ನ ವ್ಯವಹಾರವನ್ನೇ ಸ್ಥಗಿತಗೊಳಿಸಿ ಹಿಂದಿನಂತೆ ಕಾರ್ಪೆಂಟರ್ ವೃತ್ತಿಯನ್ನೇ ಮುಂದುವರಿುವಷ್ಟರ ಮಟ್ಟಿಗೆ ಹತಾಶನಾಗಿದ್ದ.

ನಮ್ಮ ತಂಡ ರಾತ್ರಿ ವೇಳೆ ಆತನ ಮನೆಗೆ ಭೇಟಿ ನೀಡಿತು. ಮನೆಯಲ್ಲಿ ಸುಮಾರು ಅರ್ಧ ಡಜನ್‌ನಷ್ಟು ಜನ. ಮಕ್ಕಳು ಮತ್ತು ಪೋಷಕರು ಸೇರಿ. ಎಲ್ಲರಲ್ಲೂ ಮಾತನಾಡಿಸಿದ ಬಳಿಕ ನಮಗೆ ಪ್ರೇತದ ಸಮಸ್ಯೆ ಯಾರದ್ದೆಂಬುದು ಸ್ಪಷ್ಟವಾಗಿತ್ತು. ಹಿರಿಯ ಪುತ್ರಿ 25ರ ವಿವಾಹವಾಗಿ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದಳು. ಆಕೆಯ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದ. ಈ ಯುವತಿ 10ರ ಹರೆಯದವಳಾಗಿದ್ದಲೇ ಮನೆಯಲ್ಲಿ ಪ್ರೇತದ ಬಾಧೆ ಆರಂಭವಾಗಿತ್ತು. ಆಕೆಗೆ ವಿವಾಹವಾಗಿ ಗಂಡನ ಮನೆಗೆ ಹೋಗಿದ್ದ ಕೆಲ ಸಂದರ್ಭ ಪ್ರೇತದಿಂದ ಹಣ ಕಳವು ಪ್ರಕರಣ ಕೆಲ ಸಮಯ ನಿಂತು ಹೋಗಿತ್ತು. ಆಕೆ ಮತ್ತೆ ತವರು ಮನೆಗೆ ಬಂದಾಗ ಪ್ರೇತದ ಸಮಸ್ಯೆ ಮತ್ತೆ ಶುರುವಾಗಿತ್ತು. ಆದರೆ ಇದ್ಯಾವುದನ್ನೂ ಪೋಷಕರು ಗಮನಿಸಿಯೇ ಇರಲಿಲ್ಲ. ಬದಲಾಗಿ ಅವರು ಮಾಂತ್ರಿಕರ ಬಳಿ ಹೋಗಿ ಸಾಷ್ಟು ದುಡ್ಡು ವೆಚ್ಚ ಮಾಡಿದ್ದರು.

ಆ ದಿನ ಮನೆಯ ಯಜಮಾನ ಇಲ್ಲವಾದ್ದರಿಂದ ವಿಚಾರಣೆಗೆ ಕೆಲವು ದಿನಗಳ ಸಮಯ ಕೋರಿ ಪತ್ರವೊಂದನ್ನು ಬರೆದೆವು. ಆದರೆ ಅದಕ್ಕೆ ಯಾವುದೇ ಸ್ಪಂದನೆ ದೊರಕಲಿಲ್ಲ. ಕೊನೆಗೊಂದು ದಿನ ನಮಗೆ ಮಾಹಿತಿ ನೀಡಿದ್ದ ನಮ್ಮ ತಂಡದ ಸದ್ಯರಿಂದಲೇ ಆ ಮನೆಯಲ್ಲಿ ಪ್ರೇತದ ಹಣ ಕದಿಯುವ ಉಪದ್ರವ ನಿಂತಿತ್ತು ಎಂಬ ಸುದ್ದಿ ಬಂದಿತ್ತು.

ಮುಂದುವರಿಯುವುದು

share
ನಿರೂಪಣೆ: ಸತ್ಯಾ ಕೆ.
ನಿರೂಪಣೆ: ಸತ್ಯಾ ಕೆ.
Next Story
X