ಆಳ್ವಾಸ್‌ನಲ್ಲಿ ಎಜ್ಯು ಮ್ಯಾಜಿಕ್ ಕಾರ್ಯಾಗಾರ

ಮೂಡುಬಿದಿರೆ, ಜು. 29: ಆಳ್ವಾಸ್ ಕಾಲೇಜಿನ ಮಾನವಿಕ ಸಂಘ ಹಾಗೂ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ‘ಎಜ್ಯು ಮ್ಯಾಜಿಕ್’ ಕಾರ್ಯಾಗಾರವನ್ನು ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಶನಿವಾರ ಉದ್ಘಾಟಿಸಲಾಯಿತು.
ಮಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮುಬಿನಾ ಫರ್ವಿನ್ ತಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿವಿಧ ರೀತಿಯ ಜಾದೂಗಳೊಂದಿಗೆ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಜ್ಞಾನಗಳನ್ನು ಹೇಗೆ ಹೆಚ್ಚಿಸಬಹುದು ಎನ್ನುವುದರ ಕುರಿತು ಮಾಹಿತಿ ನೀಡಿದರು. ಶಮಾ ಫರ್ವಿನ್ ರಾಜ್ ಜಾದೂವಿಗೆ ಸಹಕರಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನವೀನ ಪ್ರಯೋಗಗಳ ಮೂಲಕ ಜ್ಞಾನವನ್ನು ಗಳಿಸುವುದಕ್ಕೆ ಶಿಕ್ಷಣ ಮಾಧ್ಯಮವಾಗಬೇಕು. ಜಾದೂನಿಂದ ವಿಜ್ಞಾನದ ಕುರಿತು ಜ್ಞಾನವನ್ನು ಹೆಚ್ಚಿಸಬಹುದು ಎಂದರು.
ಮಾನವಿಕ ಸಂಘದ ಹೊಸ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಶ್ರೀ, ಮಾನವಿಕ ಸಂಘದ ಕಾರ್ಯದರ್ಶಿ ಮಹಮ್ಮದ್ ಸಯೀದ್, ಜೊತೆ ಕಾರ್ಯದರ್ಶಿ ಆಕಾಶ್ ಪವನ್ ಉಪಸ್ಥಿತರಿದ್ದರು. ಶಾಜ್ಲನ್ ಸ್ವಾಗತಿಸಿದರು. ರಾಜಶಾಸ್ತ್ರ ವಿಭಾಗದ ಉಪನ್ಯಾಸಕ ನಾಗರಾಜ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲ್ವ ತಾಜ್ ಕಾರ್ಯಕ್ರಮ ನಿರೂಪಿಸಿದರು. ವರ್ಷಾ ವಂದಿಸಿದರು.







