ಗುರ್ಗಾಂವ್: ಪತ್ರಕರ್ತನ ಹತ್ಯೆ

ಗುರ್ಗಾಂವ್, ಜು.29: ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಹರ್ಯಾಣದ ಗುರ್ಗಾಂವ್ ಎಂಬಲ್ಲಿ ನಡೆದಿದೆ.
ಖಾಸಗಿ ಟಿವಿ ಚಾನೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಂದ್ರ ರಾಣ ಕೊಲೆಯಾದವರು. ಇವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ದೊರೆತ ಪತ್ರಗಳ ಪ್ರಕಾರ ಇವರನ್ನು ಹರ್ಯಾಣದ ವಿಶೇಷ ವರದಿಗಾರ ಮತ್ತು ಸುದ್ದಿ ಸಂಯೋಜಕರಾಗಿ ನೇಮಿಸಲಾಗಿತ್ತು.
Next Story





