ಜು.30: ಬೆಳಪುನಲ್ಲಿ ಕೃಷಿ ಕಾರ್ಯಕ್ರಮ
ಉಡುಪಿ, ಜು.29: ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾಪು ವಲಯ ಸಮಿತಿ ಆಯೋಜಿಸಿರುವ ಕೃಷಿ ಮಾಹಿತಿ ಕಾರ್ಯಕ್ರಮ ಜು.30ರಂದು ಬೆಳಪು ಧರ್ಮ ಜಾರಂದಾಯ ದೈವಸ್ಥಾನ ವಠಾರದಲ್ಲಿ ಸಂಜೆ 4:30ಕ್ಕೆ ನಡೆಯಲಿದೆ.
ಇದರಲ್ಲಿ ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಮತ್ತು ಸಾಧನಾಶೀಲ ಕೃಷಿಕ ಪ್ರಶಸ್ತಿ ಪಡೆದ ಶ್ರೀನಿವಾಸ ಭಟ್ ಹಾಗೂ ರವೀಂದ್ರ ಗುಜ್ಜರಬೆಟ್ಟು ಭಾಗವಹಿಸಲಿದ್ದಾರೆ. ಬೆಳಪು ಹಾಗೂ ಸುತ್ತಮುತ್ತಲ ಪ್ರದೇಶಗಳ ಕೃಷಿಕರು, ಕೃಷಿ ಆಸಕ್ತರು ಪಾಲ್ಗೊಳ್ಳುವಂತೆ ಕೃಷಿಕ ಸಂಘ ವಿನಂತಿಸಿದೆ.
Next Story





