ಆಂಧ್ರದ ಗ್ರಾಮದಲ್ಲಿ ಸವರ್ಣೀಯರಿಂದ ದಲಿತರಿಗೆ ಬಹಿಷ್ಕಾರ
►ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ವಿವಾದ ►ಉದ್ಯೋಗ, ಆಹಾರವಿಲ್ಲದ ದಲಿತರು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು.29: ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ಕುರಿತ ವಿವಾದದ ಹಿನ್ನೆಲೆಯಲ್ಲಿ ಮೇಲ್ಜಾತಿಯ ಜನರು ತಮ್ಮನ್ನು ಸಾಮಾಜಿಕವಾಗಿ ಬಹಿಷ್ಕರಿಸಿರುವುದರ ವಿರುದ್ಧ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಆಂಧ್ರಪ್ರದೇಶದ ಗರಗಪಾರು ಗ್ರಾಮದ ದಲಿತರ ಗುಂಪೊಂದು ರವಿವಾರ ರಾಜಧಾನಿಯಲ್ಲಿ ಧರಣಿ ನಡೆಸಿದೆ.
ಗರಗಪಾರು ಗ್ರಾಮದಲ್ಲಿ ಮೇಲ್ಜಾತಿಗೆ ಸೇರಿದ ಭೂಮಾಲಕರು ತಮಗೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವುದರಿಂದ ತಮ್ಮ ಜೀವನೋಪಾಯ ಹಾಗೂ ಸುರಕ್ಷತೆಗೆ ಧಕ್ಕೆಯುಂಟಾಗಿದೆಯೆಂದು ನಾಲ್ವರು ದಲಿತರ ತಂಡವು ಪತ್ರಕರ್ತರ ಮುಂದೆ ದೂರಿದೆ. ಈ ವಿಚಾರವಾಗಿ ತಾವು ಕೇಂದ್ರ ಸಚಿವರು, ಸಂಸದರು ಹಾಗೂ ರಾಷ್ಟ್ರೀಯ ಮಾನವಹಕ್ಕು ಆಯೋಗವನ್ನು ಭೇಟಿಯಾಗಲು ಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಮಾಲಾ ಪರಿಶಿಷ್ಟ ಪಂಗಡದ ಸದಸ್ಯರು ಗರಗಾಪಾರು ಗ್ರಾಮದ ಕೆರೆಯ ಬಳಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿಸಲು ಮುಂದಾಗಿದ್ದರು. ಆಗ ಅದನ್ನು ಗ್ರಾಮದ ಕ್ಷತ್ರಿಯ ಪಂಗಡದವರು ವಿರೋಧಿಸಿದ್ದರು.
ಜುಲೈ 25ರಂದು ಸಾಮಾಜಿಕ ಕಲ್ಯಾಣ ಸಚಿವ ನಕ್ಕ ಆನಂದ್ ಬಾಬು, ಕಾರ್ಮಿಕ ಸಚಿವ ಪಿಥಾನಿ ಸತ್ಯನಾರಾಯಣ ಹಾಗೂ ಪರಿಶಿಶ್ಟ ಜಾತಿ ನಿಮಗದ ಅಧ್ಯಕ್ಷ ಜುಪುಡಿ ಪ್ರಭಾಕರ್ ಗ್ರಾಮಕ್ಕೆ ಭೇಟಿ, ಸಂಘರ್ಷ ನಿರತ ಎರಡೂ ಪಂಗಡಗಳ ನಡುವೆ ಸಂಧಾನ ಏರ್ಪಡಿಸಿದ್ದರು ಹಾಗೂ ಗಲಭೆಯಲ್ಲಿ ಸಂತ್ರಸ್ತರಾದ ಪ್ರತಿಯೊಂದು ದಲಿತ ಕುಟುಂಬಗಳಿಗೆ ಪರಿಹಾರವಾಗಿ 1 ಲಕ್ಷ ರೂ. ವೌಲ್ಯದ ಚೆಕ್ಗಳನ್ನು ಹಸ್ತಾಂತರಿಸಿತ್ತು.
ಗರಗಪಾರು ಗ್ರಾಮದಲ್ಲಿ ದಲಿತರಿಗೆ ವಿಧಿಸಲಾಗಿರುವ ಸಾಮಾಜಿಕ ಬಹಿಷ್ಕಾರವನ್ನು ಕೊನೆಗೊಳಿಸಲು ಕೇಂದ್ರ ಹಾಗೂ ಆಂಧ್ರ ಸರಕಾರವು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕೆಂದು ದಲಿತ ಶೋಷಣ್ ಮುಕ್ತಿ ಮಂಚ್ನ ರಾಷ್ಟ್ರೀಯ ಸಮನ್ವಯಕಾರ ವಿ,ಶ್ರೀನಿವಾಸ್ ರಾವ್ ಆಗ್ರಹಿಸಿದ್ದಾರೆ. ಗರಗಪಾರು ಗ್ರಾಮದಲ್ಲಿ ಭೂಮಾಲೀಕರ ಹೊಲದಲ್ಲಿ ದುಡಿಯುತ್ತಿದ್ದ ದಲಿತರು, ಈ ವಿವಾದದ ಬಳಿಕ ಉದ್ಯೋಗಕಳೆದುಕೊಂಡಿದ್ದಾರೆ ಎಂದು ರಾವ್ ಬೇಳಿದಗ್ದಾರೆ.
ಇತ್ತೀಚತೆಗೆ ಗರಗಪಾರು ಗ್ರಾಮದಲ್ಲಿ ದಲಿತ ನಾಯಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆಯ ಗ್ರಾಮದಲ್ಲಿ ಅಸಹಾಯಕತೆ ಹಾಗೂ ಅಭದ್ರತೆಯ ವಾತಾವರಣ ನೆಲೆಸಿದೆ. ದಲಿತ ಕುಟುಂಬಗಳು ಸಾಮಾಜಿಕ ಸಂಘಟನೆಗಳು ತೆರೆದಿರುವ ಅಡುಗೆ ಕೇಂದ್ರಗಳಿಂದ ಆಹಾರವನ್ನು ಪಡೆದು ದಿನದೂಡುತ್ತಿವೆ’’ ಎಂದು ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.







