Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ಕಾಂಟ್ರಾಕ್ಟ್' ರಾಧಿಕಾ ಮತ್ತೆ ನಟನೆಗೆ

'ಕಾಂಟ್ರಾಕ್ಟ್' ರಾಧಿಕಾ ಮತ್ತೆ ನಟನೆಗೆ

ಶಶಿಕರ ಪಾತೂರುಶಶಿಕರ ಪಾತೂರು29 July 2017 8:49 PM IST
share
ಕಾಂಟ್ರಾಕ್ಟ್ ರಾಧಿಕಾ ಮತ್ತೆ ನಟನೆಗೆ

'ಲೈಲಾ ಹೋ ಲೈಲಾ..' ಹಿಂದಿ ಹಾಡಿನ ತುಣುಕು ಕೇಳುತ್ತಿದ್ದರೆ, ರಾಧಿಕಾ ಕುಮಾರಸ್ವಾಮಿ ವೇದಿಕೆಯಲ್ಲಿ ಆಕರ್ಷಕವಾಗಿ ಹೆಜ್ಜೆ ಹಾಕುತ್ತಿದ್ದರು. ಅದು 'ಕಾಂಟ್ರಾಕ್ಟ್' ಚಿತ್ರಕ್ಕಾಗಿ ನಡೆಸಲಾಗುತ್ತಿದ್ದ ಚಿತ್ರೀಕರಣ.

ಹಾಗೆ ರಾಧಿಕಾ ಕುಮಾರಸ್ವಾಮಿ ಸಣ್ಣದೊಂದು ಬ್ರೇಕ್ ಬಳಿಕ ಮರಳಿದ್ದಾರೆ. ಬಿಸ್ನೆಸ್ ಸಂಬಂಧವಾಗಿ ಕೇರಳದಲ್ಲಿದ್ದಾಗ ಈ ಚಿತ್ರ ತಂಡದವರು ಸಂಪರ್ಕಿಸಿದರಂತೆ. "ಫೋನಲ್ಲೇ ಕತೆ ಕೇಳಿ ಒಪ್ಪಿಕೊಂಡಿದ್ದೆ. ಹಾಗಾಗಿ ಲೊಕೇಶನಲ್ಲೇ ನಿರ್ದೇಶಕ ಸಮೀರ್ ರನ್ನು ನೋಡು ವಂತಾಯಿತು.

ಚಿತ್ರದಲ್ಲಿ ಈ ಹಾಡು ಫ್ರೆಂಡ್ಸ್ ಜೊತೆ ಛಾಲೆಂಜ್ ಹಾಕಿ‌ ಕುಣಿಯುವ ಸನ್ನಿವೇಶವಾಗಿರುತ್ತದೆ. ಮೂಲ ಹಾಡಿನ ಒಂದು ತುಣಕನ್ನಷ್ಟೇ ಬಳಸಲಾಗಿದೆ. ಚಿತ್ರದಲ್ಲಿ ನನ್ನದು ಎರಡು ಶೇಡ್ ಪಾತ್ರ. ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಚಿತ್ರದ ಇಬ್ಬರು ನಾಯಕರಾದ ಅರ್ಜುನ್ ಸರ್ಜಾ ಮತ್ತು ಜೆಡಿ ಚಕ್ರವರ್ತಿಯೊಂದಿಗೆ ನನ್ನ ಕಾಂಬಿನೇಶನ್ ದೃಶ್ಯಗಳಿರುತ್ತವೆ. ಯಾರಿಗೆ ಜೋಡಿಯಾಗಿರುತ್ತೇನೆ ಎನ್ನುವುದನ್ನು ನೀವು ಸಿನಿಮಾದಲ್ಲೇ ನೋಡಿ" ಎಂದರು ರಾಧಿಕಾ.

ನಾಯಕ ಜೆಡಿ ಚಕ್ರವರ್ತಿ ಮಾತನಾಡಿ, "ನಿರ್ದೇಶಕ ಸಮೀರ್ ನನ್ನ ನಿರ್ದೇಶನದ ಚಿತ್ರಗಳಿಗೆ ಅಸಿಸ್ಟೆಂಟ್ ಆಗಿದ್ದವರು. ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳುವುದಾದರೆ ನನಗೇ ಕ್ಯಾರೆಕ್ಟರೇ ಇಲ್ಲ ಎನ್ನುವುದೇ ಪಾತ್ರ ಎಂದರು. ರಾಧಿಕಾರವರು ಕ್ಯಾಮೆರಾ ಮುಂದೆ ಬಂದಾಗ ಪಾತ್ರವಾಗಿ ಬದಲಾಗುವ ರೀತಿ ನೋಡಿ ಅಚ್ಚರಿಯಾಯಿತು' ಎಂದರು.

ಕನ್ನಡ ಕಲಿಯದಿರಲು ಕನ್ನಡಿಗರೇ ಕಾರಣ

ನನಗೆ ಕನ್ನಡ ಕಲಿಯುವ ಆಕಾಂಕ್ಷೆಯಿದೆ. ಮುಂದಿನಬಾರಿ ಪ್ರೆಸ್ಮೀಟಲ್ಲಿ ಖಂಡಿತ ಕನ್ನಡ ಮಾತನಾಡುವೆ ಅಂತ ನಾನು ಹೇಳಿದರೆ ಅದು ಸುಳ್ಳಾದೀತು. ಯಾಕೆಂದರೆ ಇಲ್ಲಿನ ಚಿತ್ರತಂಡದವರಾಗಲೀ ಈಗ ನಡೆಯುತ್ತಿರುವ ಈ ಪ್ರೆಸ್ಮೀಟ್ ನಲ್ಲಾಗಲೀ, ಎಲ್ಲರೂ ನನ್ನೊಂದಿಗೆ ತೆಲುಗು ಮಾತನಾಡಿ ಪ್ರೋತ್ಸಾಹ ನೀಡುತ್ತಿದ್ದೀರಿ. ಇಂಥ ಭಾಷಾ ಸಾಮರಸ್ಯವನ್ನು ನಾನು ಇನ್ನೆಲ್ಲೂ ನೋಡಿಲ್ಲ ! ಅಂದಹಾಗೆ ಈ ಮಾತು ಹೇಳಿದ್ದು ತೆಲುಗಿನ ಖ್ಯಾತನಟ ಜೆಡಿ ಚಕ್ರವರ್ತಿ.

ನಿರ್ದೇಶಕರ ಮಾತು

ನಿರ್ದೇಶಕ ಸಮೀರ್ ಮಾತನಾಡಿ,  ಚಿತ್ರವನ್ನು ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ ಎರಡು ಶೆಡ್ಯೂಲ್ ಪೂರ್ತಿಯಾಗಿದೆ. ಅರ್ಜುನ್ ಸರ್ಜಾ ಬಿಸ್ನೆಸ್ ಮ್ಯಾಗ್ನೆಟ್ ಅಂಬಾನಿಯಂಥ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಆ್ಯಕ್ಷನ್ , ಥ್ರಿಲ್ಲರ್, ಫ್ಯಾಮಿಲಿ ಎಂಟರ್ಟೇನ್ಮೆಂಟ್ ಇರುವಂಥ ಚಿತ್ರ.‌ ಹಾಲಿವುಡ್ ಸಿನಿಮಾವೊಂದರ ಸ್ಫೂರ್ತಿ ಇದೆ.

ಚಿತ್ರವನ್ನು ತುಂಬ ರಿಚ್ಚಾಗಿ ಚಿತ್ರೀಕರಿಸುತ್ತಿದ್ದು, ದೃಶ್ಯವೊಂದನ್ನು ವಿವಿಧ ವಿದೇಶೀ ಕಾರುಗಳನ್ನು ಬಳಸಿಕೊಂಡು ಶೂಟಿಂಗ್ ಮಾಡಿದ್ದೇವೆ.‌ ಅಮೀರ್ ಖಾನ್ ಸಹೋದರ ಫೈಝಲ್ ಖಾನ್ ನಟಿಸಿರುವುದು ವಿಶೇಷ. ಕಬೀರ್ ಲಾಲ್ ಸಹೋದರ ಕಬೀರ್ ಲಾಲ್ ಚಿತ್ರದ ಛಾಯಾಗ್ರಾಹಕ. ಚಿತ್ರದಲ್ಲಿ ಒಟ್ಟು‌ 6 ಹಾಡುಗಳಿವೆ. ಮೈಸೂರು ಅರಮನೆ ಸೇರಿದಂತೆ ಥಾಯ್ಲ್ಯಾಂಡ್, ಮಲೇಷ್ಯಾ ಗಳಲ್ಲಿ ಹಾಡಿನ ಚಿತ್ರೀಕರಣವಿದೆ. ಹೈದರಾಬಾದ್, ಕೊಲ್ಲಾಪುರದಲ್ಲಿಯೂ ಶೂಟಿಂಗ್ ಮುಂದುವರಿಯುವುದು ಎಂದರು.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X