ನೇಮಕ

ಕಡೂರು, ಜು. 29: ಕನ್ನಡ ಜಾನಪದ ಪರಿಷತ್ ಯಗಟಿ ಹೋಬಳಿ ಅಧ್ಯಕ್ಷರಾಗಿ ಎ.ಎಂ. ಜಗದೀಶ್ವರಾಚಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದ್ದಾರೆ.
ಜಾನಪದದಲ್ಲಿ ವಿಶೇಷ ಆಸಕ್ತಿ ಇರುವ ತಮಗೆ ಯಗಟಿ ಹೋಬಳಿ ಅಧ್ಯಕ್ಷ ಜವಾಬ್ದಾರಿ ನೀಡಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ತಾವು ತಾಲೂಕಿನಲ್ಲಿರುವ ಜಾನಪದ ಕಲೆ ಮತ್ತು ಕಲಾವಿದರ ಮಾಹಿತಿ ಸಂಗ್ರಹ ಹಾಗೂ ನಶಿಸಿಹೋಗುತ್ತಿರುವ ಜಾನಪದ ಕಲೆಯನ್ನು ಬೆಳೆಸುವ ಜೊತೆಗೆ ಪ್ರೋತ್ಸಾಹಿಸುವುದಾಗಿ ನೂತನ ಅಧ್ಯಕ್ಷ ಎ.ಎಂ. ಜಗದೀಶ್ವರಾಚಾರ್ ಹೇಳಿದ್ದಾಗಿ ತಿಳಿಸಿದ್ದಾರೆ.
ತಮ್ಮ ಮುಂದು ಜಾನಪದ ಪದಕೋಶ ಹಾಗೂ ಜಾನಪದ ಕಲಾವಿದರ ದಾಖಲಾತಿಯೊಂದಿಗೆ ಮಾಹಿತಿ ಕೋಶ ಹೊರತರುವುದು ಬಹಳ ಪ್ರಮುಖವಾದ ಕೆಲಸವಾಗಿದೆ ಎಂದು ಹೇಳಿಕೆಯಲ್ಲಿ ಶನಿವಾರ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
Next Story





