ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ ವಾರ್ಷಿಕ ಮಹಾಸಭೆ
ಅಧ್ಯಕ್ಷರಾಗಿ ಲತೀಫ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಖ್ ದಾರಿಮಿ ಪುನರಾಯ್ಕೆ

ದೇರಳಕಟ್ಟೆ, ಜು. 29: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದೇರಳಕಟ್ಟೆ ಕೇಂದ್ರ ಮದ್ರಸಾದಲ್ಲಿ ನಡೆಯಿತು.
ಸಮಸ್ತ ವಿದ್ಯಾಭ್ಯಾಸ ಮಂಡಳಿಯ ತಪಾಸಣಾಧಿಕಾರಿ ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಕೇಂದ್ರ ಮಸೀದಿಯ ಮುದರ್ರಿಸ್ ಮುಹಮ್ಮದ್ ಶರೀಫ್ ಅರ್ಶದಿ ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ಹಾಗೂ ಯಾಸಿರ್ ಅರಾಫತ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಪ್ರಧಾನ ಕಾರ್ಯದರ್ಶಿ ಯಾಗಿ ಫಾರೂಖ್ ದಾರಿಮಿ ಗ್ರಾಮಚಾವಡಿ, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಹಾಜಿ ಪನೀರು, ಉಪಾಧ್ಯಕ್ಷರಾಗಿ ಅಬ್ದುಲ್ಲ ಫೈಝಿ ದೇರಳಕಟ್ಟೆ, ಅಬ್ದುರ್ರಝಾಕ್ ಅಝ್ಹರಿ ಪಾತೂರು, ಜೊತೆ ಕಾರ್ಯದರ್ಶಿಗಳಾಗಿ ಇರ್ಫಾನ್ ಮೌಲವಿ ಮಲಾರ್, ಇಬ್ರಾಹೀಮ್ ಫೈಝಿ ಬದ್ಯಾರು, ಪರೀಕ್ಷಾ ಬೋರ್ಡ್ ಚೇರ್ಮೆನ್ ಆಗಿ ಅಬೂಬಕರ್ ದಾರಿಮಿ ಉಕ್ಕುಡ, ವೈಸ್‌ಚೇರ್ಮೆನ್ ಆಗಿ ಹನೀಫ್ ದಾರಿಮಿ ಗ್ರಾಮಚಾವಡಿ, ಇಸ್ಹಾಖ್ ಫೈಝಿ ಜಲಾಲ್ ಬಾಗ್, ರೇಂಜ್ ಎಸ್.ಬಿ.ವಿ. ಚೇರ್ಮೆನ್ ಆಗಿ ಹೈದರ್ ಅಲೀ ಮಿಸ್ಬಾಹಿ ಅರ್ಕಾನ, ಸಂಚಾಲಕರಾಗಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದೇರಳಕಟ್ಟೆ, ಕಣ್ಣಿಯತ್ ಉಸ್ತಾದ್ ರಿಲೀಫ್ ಸೆಂಟರ್ ಚೇರ್ಮೆನ್ ಯಾಸಿರ್ ಅರಾಫತ್ ಕೌಸರಿ ಪನೀರು, ಸಂಚಾಲಕರಾಗಿ ಅಬ್ದುರ್ರಶೀದ್ ಯಮಾನಿ ಪರೇಕ್ಕಳ, ಕುರುನ್ನಗಳ್ ಬಾಲ ಮಾಸಿಕದ ಸಂಚಾಲಕರಾಗಿ ಇಕ್ಬಾಲ್ ಮುಸ್ಲಿಯಾರ್ ಕಿನ್ಯ ಆಯ್ಕೆಯಾದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಖ್ ದಾರಿಮಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಇರ್ಫಾನ್ ಮೌಲವಿ ವಂದಿಸಿದರು.







