12ರ ಬಾಲೆಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ನಿರಾಕರಣೆ

ಕೊಚ್ಚಿ, ಜು. 29: ಅದು ಆಕೆಗೆ ಶಾಶ್ವತ ಹಾನಿ ಉಂಟು ಮಾಡಬಹುದು ಎಂದು ವೈದ್ಯಕೀಯ ವರದಿ ಹೇಳಿದ ಬಳಿಕ ಅತ್ಯಾಚಾರ ಸಂತ್ರಸ್ತೆ 12 ವರ್ಷದ ಬಾಲಕಿ 28 ವಾರದ ಭ್ರೂಣದ ಗರ್ಭಪಾತ ಮಾಡಲು ಕೇರಳ ಉಚ್ಚ ನ್ಯಾಯಾಲಯ ಶುಕ್ರವಾರ ಅನುಮತಿ ನಿರಾಕರಿಸಿದೆ.
ಆಲಪ್ಪುಳ ಸರಕಾರಿ ಟಿಡಿ ವೈದ್ಯಕೀಯ ಕಾಲೇಜು ಆಸ್ಪತ್ರೆ ವರದಿ ಪರಿಶೀಲಿಸಿದ ಬಳಿಕ ವಿಭಾಗೀಯ ನ್ಯಾಯಪೀಠ ಗರ್ಭಪಾತಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ಗರ್ಭಪಾತ ಆಕೆ ಶಾಶ್ವತ ಹಾನಿ ಉಂಟು ಮಾಡಬಹುದು. ಅದು ಆಕೆಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವಿಭಾಗೀಯ ನ್ಯಾಯಪೀಠ ಹೇಳಿದೆ. ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಈ ಹಂತದಲ್ಲಿ ಗರ್ಭಪಾತ ಮಾಡುವುದು ಅಪಾಯಕಾರಿ ಎಂದು ಭ್ರೂಣದ ಬೆಳವಣಿಗೆ ಆಧರಿಸಿ ವೈದ್ಯಕೀಯ ಮಂಡಳಿ ಹೇಳಿದೆ.
ಬಾಲಕಿಯು ಸಮರ್ಪಕ ರೀತಿಯಲ್ಲಿ ಬೆಳೆದು ಹರೆಯದ ಹುಡುಗಿಯಾಗಿದ್ದಾಳೆ ಎಂದು ವೈದ್ಯಕೀಯ ಮಂಡಳಿಯ ವರದಿ ಹೇಳುತ್ತದೆ ಎಂದು ನ್ಯಾಯಪೀಠ ಹೇಳಿದೆ.
ತಾಯಿ ಹಾಗೂ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಾಯಿ ಉದ್ಯೋಗ ಪಡೆಯಲು ಸಾಧ್ಯವಾಗುವಂತೆ ತಾಯಿಗೆ ಉತ್ತಮ ಶಿಕ್ಷಣ ನೀಡಬೇಕು. ಇದು ಸರಕಾರದ ಬಾಧ್ಯತೆ ಎಂದು ನ್ಯಾಯಪೀಠ ಹೇಳಿದೆ.
ರಾಜ್ಯ ಸರಕಾರದ ಸಂತ್ರಸ್ತರ ಪರಿಹಾರ ಯೋಜನೆಯಿಂದ ತಾಯಿಗೆ ಉಳಿದ ಸೌಲಭ್ಯ ನೀಡುವಲ್ಲಿ ಮಕ್ಕಳ ಕಲ್ಯಾಣ ಸಮಿತಿ ಭರವಸೆ ನೀಡಬೇಕು. ಸಂತ್ರಸ್ತೆ ಅಪ್ರಾಪ್ತೆ ಆಗಿರುವುದರಿಂದ ಸ್ವೀಕರಿಸಲಾದ ಮೊತ್ತವನ್ನು ಸ್ಥಿರ ಠೇವಣಿಯಾಗಿ ಇರಿಸಬೇಕು. ಆಕೆ ಪ್ರಾಪ್ತಳಾಗುವ ವರೆಗ ಈ ಹಣ ಬಳಸಬೇಕು ಎಂದು ನ್ಯಾಯಪೀಠ ತಿಳಿಸಿದೆ.







