ಇಂದ್ರಾಣಿ ಮುಖರ್ಜಿ ಶೀನಾ ಬೋರಾಳ ಕತ್ತು ಹಿಸುಕಿ ಮುಖದ ಮೇಲೆ ಕುಳಿತಿದ್ದಳು: ಚಾಲಕ

ಮುಂಬೈ, ಜು. 29: ಇಂದ್ರಾಣಿ ಮುಖರ್ಜಿ ತನ್ನ ಪುತ್ರಿ ಶೀನಾ ಬೋರಾಳ ಕತ್ತು ಹಿಸುಕಿದ್ದಳು ಹಾಗೂ ಆಕೆಯ ಮುಖದ ಮೇಲೆ ಕುಳಿತುಕೊಂಡಿದ್ದಳು ಎಂದು ಇಂದ್ರಾಣಿ ಮುಖರ್ಜಿಯ ಚಾಲಕ ಹಾಗೂ ಪ್ರಕರಣದ ಸಹ ಆರೋಪಿ ಇಂದು ಮುಂಬೈ ನ್ಯಾಯಾಲಯದಲ್ಲಿ ಹೇಳಿದ್ದಾನೆ.
ಶೀನಾಳ ಮುಖದ ಮೇಲೆ ಇಂದ್ರಾಣಿ ಮುಖರ್ಜಿ ಕುಳಿತಿದ್ದಳು ಹಾಗೂ ಇಲ್ಲಿ ನಿನಗೆ ಮೂರು ಬೆಡ್‌ರೂಮ್‌ನ ಫ್ಲಾಟ್ ಎಂದು ಹೇಳಿದ್ದಳು. ಶೀನಾ ಬೋರಾ ಸಾವನ್ನಪ್ಪಿದ ಬಳಿಕ ಶವವನ್ನು ಇಂದ್ರಾಣಿ ಮುಖರ್ಜಿ ಸುಟ್ಟು ಹಾಕಿದ್ದಳು ಎಂದು ಇಂದ್ರಾಣಿ ಮುಖರ್ಜಿಯ ಚಾಲಕ ಶ್ಯಾಮ್‌ವರ್ ರೈ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ತಿಳಿಸಿದ್ದಾನೆ ಇಂದ್ರಾಣಿಯ ಹಿಂದಿನ ವಿವಾಹ ಸಂಬಂಧದಲ್ಲಿ ಹುಟ್ಟಿದ ಪುತ್ರಿ ಶೀನಾ ಬೋರಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಪತಿ, ಮಾಧ್ಯಮ ಸಂಸ್ಥೆಯೊಂದರ ಮಾಲಕ ಪೀಟರ್ ಮುಖರ್ಜಿ 2015ರಿಂದ ಕಾರಾಗೃಹದಲ್ಲಿದ್ದಾರೆ.
25 ವರ್ಷದ ಶೀನಾ ಬೋರಾಳನ್ನು 2012ರಲ್ಲಿ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಚಾಲಕ ಹತ್ಯೆ ಮಾಡಿದ್ದರು. ಶೀನಾ ಬೋರಾ ಪೀಟರ್ ಮುಖರ್ಜಿಯ ಪುತ್ರ ರಾಹುಲ್ ಮುಖರ್ಜಿಯನ್ನು ಪ್ರೀತಿಸುತ್ತಿದ್ದಳು. ಶೀನಾ ಬೋರ ಕೊಲೆಯಾಗುವಾಗ ತಾನು ಅಮೆರಿಕದಲ್ಲಿ ಇದ್ದೆ ಎಂದು ಇಂದ್ರಾಣಿ ಮುಖರ್ಜಿ ಪ್ರತಿಪಾದಿಸಿದ್ದಳು.
ಘಟನೆ ನಡೆದ ಮೂರು ವರ್ಷಗಳ ಬಳಿಕ ಬೆಳಕಿಗೆ ಬಂದಿತ್ತು. ಇಂದ್ರಾಣಿ ಮುಖರ್ಜಿಯ ಚಾಲಕ ಶ್ಯಾಮ್‌ವರ್ ರೈ ಈ ಬಗ್ಗೆ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದ. ಅತ ನೀಡಿದ ಮಾಹಿತಿಯಂತೆ ಪೊಲೀಸರು ಶೀನಾ ಬೋರಾಳ ಶವದ ಅವಶೇಷಗಳನ್ನು ಪೊಲೀಸರು ಪತ್ತೆ ಮಾಡಿದ್ದರು.







