ಮಿಥಾಲಿಗೆ 1 ಕೋ.ರೂ.ಉಡುಗೊರೆ ನೀಡಿದ ತೆಲಂಗಾಣ ಸರಕಾರ

ಹೈದರಾಬಾದ್, ಜು.29: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್‌ಗೆ 1 ಕೋ.ರೂ.ಬಹುಮಾನ ಹಾಗೂ ಮನೆ ನಿವೇಶನವನ್ನು ಉಡುಗೊರೆಯಾಗಿ ನೀಡುವುದಾಗಿ ತೆಲಂಗಾಣ ಸರಕಾರ ಘೋಷಿಸಿದೆ.
ಶುಕ್ರವಾರ ತನ್ನನ್ನು ಭೇಟಿಯಾದ ಮಿಥಾಲಿ ರಾಜ್‌ಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಇತ್ತೀಚೆಗೆ ಕೊನೆಗೊಂಡ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್ ತನಕ ಮುನ್ನಡೆಸಿದ್ದ ಮಿಥಾಲಿಯ ಸಾಧನೆಯನ್ನು ಶ್ಲಾಘಿಸಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. 34ರ ಹರೆಯದ ಕ್ರಿಕೆಟ್ ಆಟಗಾರ್ತಿ 1 ಕೋ.ರೂ. ನಗದು ಮೊತ್ತ ಹಾಗೂ ಮನೆ ನಿವೇಶನವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಮಿಥಾಲಿರಾಜ್‌ರ ಕೋಚ್ ಆರ್‌ಎಸ್‌ಆರ್ ಮೂರ್ತಿ ಅವರನ್ನು ಸನ್ಮಾನಿಸಿದ ರಾವ್ 25 ಲಕ್ಷ ರೂ. ಬಹುಮಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಿಥಾಲಿಯ ಹೆತ್ತವರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Next Story





