Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಗೂಗಲ್ ಸರ್ಚ್ ಬಳಸಿ ಕನ್ನಡ ಪಠ್ಯದ...

ಗೂಗಲ್ ಸರ್ಚ್ ಬಳಸಿ ಕನ್ನಡ ಪಠ್ಯದ ಹುಡುಕಾಟ

ಡಿಜಿಟಲ್ ಕನ್ನಡ

ಎ. ಸತ್ಯನಾರಾಯಣಎ. ಸತ್ಯನಾರಾಯಣ30 July 2017 3:55 PM IST
share
ಗೂಗಲ್ ಸರ್ಚ್ ಬಳಸಿ ಕನ್ನಡ ಪಠ್ಯದ ಹುಡುಕಾಟ

ಅಗತ್ಯ ಮಾಹಿತಿಗಾಗಿ ಅಂತರ್ಜಾಲವನ್ನು ಜಾಲಾಡಲು ಹಲವಾರು ಸರ್ಚ್ ಎಂಜಿನ್‌ಗಳಿವೆ. ಬೇಕಾದ ಮಾಹಿತಿಗಳು ಇರಬಹುದಾದ ಅಂತರ್ಜಾಲತಾಣಗಳ ದೊಡ್ಡ ಪಟ್ಟಿಯನ್ನು ಕ್ಷಣಾರ್ಧದಲ್ಲಿ ಕಣ್ಣಮುಂದೆ ತಂದಿಡುವ ಸರ್ಚ್ ಇಂಜಿನ್‌ಗಳಲ್ಲಿ ಇಂಗ್ಲಿಷ್ ಅಷ್ಟೇ ಅಲ್ಲದೆ ಕನ್ನಡದ ಮಾಹಿತಿಯನ್ನೂ ಸಹ ಹುಡುಕಾಡಬಹುದು. ಅದಕ್ಕಾಗಿ ಕನ್ನಡ ಲಿಪಿ ಯಲ್ಲಿ ಪದ, ಪದಪುಂಜಗಳನ್ನು ನಮೂದಿಸುವುದು ಅಗತ್ಯ. ಯಾವುದೇ ವಿಷಯದ ಕುರಿತಾಗಿ ಮಾಹಿತಿ ಬೇಕಾದರೆ ನಮಗೆ ಇಂಗ್ಲಿಷ್‌ನಲ್ಲಿಯೇ ಹುಡುಕುವುದು ಅಭ್ಯಾಸವಾಗಿ ಹೋಗಿದೆ. ಕನ್ನಡ ಭಾಷೆಯ ಕುರಿತಾಗಿ ತಿಳಿಯಲು ಇಂಗ್ಲಿಷ್‌ನಲ್ಲಿಯೇ 'ಓಚ್ಞ್ಞ' ಎಂದು ಟೈಪ್‌ಮಾಡುತ್ತೇವೆಯೇ ಹೊರತು 'ಕನ್ನಡ' ಎಂದು ನಮೂದಿಸಬೇಕು ಎಂಬುದು ತಕ್ಷಣಕ್ಕೆ ಅನ್ನಿಸುವುದೇ ಇಲ್ಲ. ಹಾಗೆ, ಹುಡುಕಾಡಲು ಸರ್ಚ್ ಬಾಕ್ಸ್ ನಲ್ಲಿ ಕನ್ನಡ ಲಿಪಿಯನ್ನು ಮೂಡಿಸುವುದು ಹೇಗೆ ಎಂಬುದೇ ಬಹುತೇಕರಿಗೆ ತಿಳಿದಿರುವುದಿಲ್ಲ.

ಯಾವುದಾದರೊಂದು ವಿಷಯದ ಕುರಿತಾಗಿ ಪ್ರಬಂಧವನ್ನು ಬರೆಯುವ ಅಸೈನ್‌ಮೆಂಟ್‌ಗಾಗಿ ಶಾಲಾಮಕ್ಕಳು ಇಂದು ಗೂಗಲ್ ಸರ್ಚ್ ಮೂಲಕ ಇಂಗ್ಲಿಷ್ ಮಾಹಿತಿಯನ್ನು ಪಡೆದು ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಿಕೊಳ್ಳುವ ಬಳಸು ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇಂತಹ ಮಾಹಿತಿಗಳನ್ನು ಕನ್ನಡಲಿಪಿಯಲ್ಲಿಯೇ ಪಡೆಯಬೇಕಾದರೆ, ಅದಕ್ಕಾಗಿ ಹುಡುಕಾಟವನ್ನು ಹೇಗೆ ಮಾಡಬೇಕು ಎಂಬುದು ಮಕ್ಕಳಿಗಿರಲಿ ಅವರ ಪೋಷಕರಿಗೂ ಸಹ ತಕ್ಷಣಕ್ಕೆ ತಿಳಿದಿರು ವುದಿಲ್ಲ. ಅಂತರ್ಜಾಲ ತಾಣಗಳಲ್ಲಿ ನಾನಾ ವಿಷಯಗಳ ಕುರಿತಾಗಿ ಕನ್ನಡಲಿಪಿಯಲ್ಲಿ ಮಾಹಿತಿಗಳು ಬೇಕಾದಷ್ಟು ಇವೆ. ಬಹುತೇಕ ಎಲ್ಲಾ ಕನ್ನಡದ ಪತ್ರಿಕೆಗಳು ಇಂದು ಅಂತರ್ಜಾಲದಲ್ಲಿ ಓದಲು ದೊರೆಯುತ್ತವೆ.

ಕನ್ನಡದ ನ್ಯೂಸ್ ಪೋರ್ಟಲ್‌ಗಳಿವೆ. ಕನ್ನಡದ ಇ-ಪೇಪರ್‌ಗಳಿವೆ. ಸ್ಮಾರ್ಟ್ ಫೋನ್‌ಗಳು ಮತ್ತು ಕಂಪ್ಯೂಟರುಗಳಲ್ಲಿ ಯುನಿಕೋಡ್ ಎನ್‌ಕೋಡಿಂಗ್ ವ್ಯವಸ್ಥೆಯು ಜಾರಿಯಾದ ನಂತರ ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಅಳವಡಿಸಿರುವುದರಿಂದ ಈಗ ಕನ್ನಡದ ಬಳಕೆ ಸುಲಭವಾಗಿದೆ.

ವಿಶ್ವದಲ್ಲಿಯೇ ಗೂಗಲ್ ಸರ್ಚ್ ಎಂಜಿನ್ ಅತ್ಯಂತ ಜನಪ್ರಿಯ ವಾಗಿದೆ. ಸ್ಮಾರ್ಟ್‌ಫೋನ್‌ನ ಇಂಟರ್‌ನೆಟ್ ಬೌಸರ್‌ನ ಅಡ್ರೆಸ್‌ಬಾರ್ ನಲ್ಲಿ google.co.in  ಎಂದು ನಮೂದಿಸಿ ಮುಂದುವರಿದರೆ 'ಗೂಗಲ್ ಸರ್ಚ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ,google.co.in offered in: ಎಂಬುದರ ನಂತರ 9 ಭಾರತೀಯ ಭಾಷೆಗಳು ಆಯಾಯ ಲಿಪಿಯಲ್ಲಿ ಕಾಣಿಸುತ್ತವೆ. ಅದರಲ್ಲಿರುವ 'ಕನ್ನಡ' ಎಂಬ ಪದವನ್ನು ಒತ್ತಿದ ತಕ್ಷಣ ಗೂಗಲ್‌ಪೇಜ್‌ನ ಇಂಟರ್‌ಫೇಸ್ ಕನ್ನಡಕ್ಕೆ ಬದಲಾಗುತ್ತದೆ. ನಂತರ, ಮೊದಲಿಗೆ, ಕನ್ನಡದ ಯಾವುದಾದರೊಂದು ಕೀಬೋರ್ಡ್ ಆ್ಯಪ್‌ನ್ನು ಇನ್‌ಸ್ಟಾಲ್ ಮಾಡಿಕೊಂಡು ಸ್ಮಾರ್ಟ್‌ಫೋನಿನ ಇನ್‌ಪುಟ್ ಲ್ಯಾಂಗ್ವೇಜ್‌ನ್ನು ಕನ್ನಡಕ್ಕೆ ನಿಗದಿಪಡಿಸಿಕೊಳ್ಳಬೇಕು. ಅಥವಾ, ಆಂಡ್ರಾಯ್ಡಾ ಫೋನ್ ಆಗಿದ್ದರೆ ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್ ಇದ್ದರೆ ಟೈಪಿಂಗ್ ಕಿರಿಕಿರಿಯಿಲ್ಲದೆ, ಕೈಬೆರಳಲ್ಲಿ ಕನ್ನಡ ಮೂಡಿಸಬಹುದು. ಸರ್ಚ್‌ಬಾಕ್ಸ್‌ನಲ್ಲಿ ಕನ್ನಡದ ಪದ ಅಥವಾ ಪದಪುಂಜಗಳನ್ನು ಮೂಡಿಸಿ "google" ಹುಡುಕಾಟ ಬಟನ್ ಒತ್ತಿ ಅಗತ್ಯವಿರುವ ಕನ್ನಡದ ಮಾಹಿತಿಗಳಿಗಾಗಿ ಅಂತರ್ಜಾಲ ತಾಣಗಳನ್ನು ಜಾಲಾಡಬಹುದು. ಹುಡುಕುತ್ತಿರುವ ಮಾಹಿತಿಗಳು ದೊರೆತರೆ ಅಂತಹ ಜಾಲತಾಣಗಳಿಗೆ ಹೋಗಿ ಪಠ್ಯವನ್ನು ಕಾಪಿ ಮಾಡಿಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.

ಸ್ಮಾರ್ಟ್‌ಫೋನ್ ಬದಲಾಗಿ, ಗೂಗಲ್ ಸರ್ಚ್‌ಪೇಜನ್ನು ಕಂಪ್ಯೂಟರ್ ಬಳಸಿ ತೆರೆದರೆ ಕನ್ನಡವನ್ನು ನಮೂದಿಸಲು ಸರ್ಚ್ ಬಾಕ್ಸ್‌ನ ಪಕ್ಕದಲ್ಲಿರುವ ಕೀಬೋರ್ಡ್ ಚಿಹ್ನೆಯನ್ನು (ಇನ್‌ಪುಟ್ ಸಲಕರಣೆಗಳು) ಕ್ಲಿಕ್‌ಮಾಡ ಬಹುದು. ತೆರೆದುಕೊಳ್ಳುವ ಫೋನೋಟಿಕ್ ಕೀಬೋರ್ಡ್‌ನ ಕೀಲಿಗಳನ್ನು ಕ್ಲಿಕ್‌ಮಾಡಿ ಕನ್ನಡ ಪದಗಳನ್ನು ಮೂಡಿಸಬಹುದು. ಇದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಆದರೆ, 'ನುಡಿ', 'ಬರಹ'ದಂತಹ 'ಲಿಪಿತಂತ್ರಾಂಶ'ಗಳು ಇನ್‌ಸ್ಟಾಲ್ ಆಗಿದ್ದರೆ ಅದನ್ನು ಸಕ್ರಿಯಗೊಳಿಸಿ ಟೈಪ್ ಮಾಡುವುದು ಸುಲಭ. ಇಲ್ಲಿ ಒಂದು ಅಂಶ ಗಮನಿಸಬೇಕು. ಲಿಪಿತಂತ್ರಾಂಶ ಸಕ್ರಿಯ ಗೊಳಿಸಿದಾಗ ಯುನಿಕೋಡ್ ಸೆಟ್ಟಿಂಗ್ ಅತ್ಯಗತ್ಯ. ಇಲ್ಲದಿದ್ದರೆ ವಿಚಿತ್ರ ಲಿಪಿಯು ಮೂಡುತ್ತದೆ.

ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಿಗೆ ಹೋಲಿಸಿದರೆ ಕನ್ನಡ ಲಿಪಿಯಲ್ಲಿ 'ಗೂಗಲ್ ಸರ್ಚ್' ಕಡಿಮೆ ಪ್ರಮಾಣದಲ್ಲಿದೆ. ಕನ್ನಡ ಇಂಟರ್‌ಫೇಸ್ ಬಳಸುವವರೆಷ್ಟು, ಕನ್ನಡಲಿಪಿಯಲ್ಲಿ ಸರ್ಚ್ ಮಾಡುವವರೆಷ್ಟು ಎಂಬ ಅಂಕಿಅಂಶಗಳು ಸ್ವಯಂಚಾಲಿತವಾಗಿ ಗೂಗಲ್ ಸರ್ವರ್‌ಗಳಲ್ಲಿ ದಾಖಲಾಗಿ ವಿಶ್ಲೇಷಣೆಗೆ ಒಳಗಾಗುತ್ತದೆ. ಗೂಗಲ್ ಇದುವರೆಗೂ ತನ್ನ 'ಗೂಗಲ್ ನ್ಯೂಸ್'ನಲ್ಲಿ ಕನ್ನಡವನ್ನು ಅಳವಡಿಸದಿರುವುದಕ್ಕೆ ಕನ್ನಡದ 'ಸರ್ಚ್ ಕೌಂಟ್' ಕಡಿಮೆ ಇರುವುದೂ ಸಹ ಒಂದು ಕಾರಣವಾಗಿರಬಹುದು. ತನ್ನ ಉತ್ಪನ್ನಗಳಲ್ಲಿ ಕನ್ನಡವನ್ನು ಅಳವಡಿಸುವಂತೆ ಗೂಗಲ್‌ನ್ನು ನಾವು ಒತ್ತಾಯಿಸಿದರಷ್ಟೇ ಸಾಲದು. ಇಂಟರ್‌ಫೇಸ್‌ನ್ನು ಕನ್ನಡಕ್ಕೆ ಬದಲಾಯಿಸಿ ಬಳಸೋಣ. ಕನ್ನಡ ಪಠ್ಯವನ್ನು ಹೆಚ್ಚುಹೆಚ್ಚು ಹುಡುಕಾಡುವ ಮೂಲಕ ಸರ್ಚ್‌ಕೌಂಟ್ ಹೆಚ್ಚಿಸೋಣ. ಆಗ ಮಾತ್ರವೇ ಅಂತರ್ಜಾಲದಲ್ಲಿ ತಮ್ಮ ಭಾಷಾಪಠ್ಯವನ್ನು ಹುಡುಕುವಲ್ಲಿ ಕನ್ನಡಿಗರೂ ಸಕ್ರಿಯವಾಗಿದ್ದಾರೆ ಎಂಬ ಸಂದೇಶ ಗೂಗಲ್‌ಗೆ ತಲುಪುತ್ತದೆ. ಆಗ ಗೂಗಲ್ ಅಷ್ಟೇಅಲ್ಲದೆ, ಇತರೆ ಬಹುರಾಷ್ಟ್ರೀಯ ಕಂಪೆನಿಗಳ ಸೇವೆಗಳಲ್ಲಿ, ತಂತ್ರಾಂಶಗಳಲ್ಲಿ ಮತ್ತು ಆ್ಯಪ್‌ಗಳಲ್ಲಿ ಕನ್ನಡವು ತನ್ನ ಸ್ಥಾನಮಾನವನ್ನು ಸುಲಭವಾಗಿ ಗಳಿಸುತ್ತದೆ.

share
ಎ. ಸತ್ಯನಾರಾಯಣ
ಎ. ಸತ್ಯನಾರಾಯಣ
Next Story
X