ಪದಕ ಪಡೆದ 7 ವಿದ್ಯಾರ್ಥಿಗಳು

ಚಿಕ್ಕಮಗಳೂರು, ಜು.30: ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬ್ರೈನೋ ಬ್ರೇನ್ ಉತ್ಸವದಲ್ಲಿ ಚಿಕ್ಕಮಗಳೂರಿನ ಬ್ರೈನೋ ಬ್ರೇನ್ ಅಬಾಕಸ್ ಸಂಸ್ಥೆಯ 7 ವಿದ್ಯಾರ್ಥಿಗಳು ಪದಕ ಗಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿ.ಆರ್.ಕೆ.ಗೌಡ, ಮೊಹಮ್ಮದ್ ಸಫಿಯಾನ್, ಎನ್.ವಿ.ರಿದ್ಧಿ ಚಿನ್ನದ ಪದಕ ಪಡೆದುಕೊಂಡರು. ಶ್ರೀಯಾನ್ ಎಸ್.ಸಾರ್‌ಗೋಡ್, ಆಯುಷ್ ಆರ್.ಮೆಂಡನ್, ಮೊಹಮ್ಮದ್ ಅರ್ಫಲಾನ್, ವಿಶ್ವಾಸ್ ಬೆಳ್ಳಿಪದಕ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ಒಟ್ಟು 1175 ವಿದ್ಯಾರ್ಥಿಗಳು ರಾಜ್ಯಾದ್ಯಂತ ಭಾಗವಹಿಸಿದ್ದು, ಚಿಕ್ಕಮಗಳೂರಿನ ಬ್ರೈನೋ ಬ್ರೇನ್ ಅಬಾಕಸ್ ಸಂಸ್ಥೆಗೆ 7 ಪದಕಗಳು ಲಭಿಸಿದೆ ಎಂದು ಫ್ಯಾಕಲ್ಟಿ ಪ್ರತಿಭಾ ಆರ್. ತಿಳಿಸಿದ್ದಾರೆ.
Next Story





